ಆಡಳಿತ ಅಸ್ತಿತ್ವದಲ್ಲಿಲ್ಲ; ಮುಖ್ಯಾಧಿಕಾರಿ ಹುದ್ದೆಯೂ ಖಾಲಿ

  |   Dakshina-Kannadanews

ಬಂಟ್ವಾಳ: ಒಂದೆಡೆ ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಇನ್ನೂ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ. ಇನ್ನೊಂದೆಡೆ ಈಗ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆಗೊಂಡು 10 ದಿನಗಳು ಕಳೆದರೂ ಇನ್ನೂ ನೂತನ ಮುಖ್ಯಾಧಿಕಾರಿ ಬಂದಿಲ್ಲ. ಹೀಗಾಗಿ ಪುರಸಭೆಯಲ್ಲಿ ಆಡಳಿತದ ಜತೆಗೆ ಅಧಿಕಾರಿಯೂ ಇಲ್ಲ ದಂತಾಗಿದೆ.

ಬಂಟ್ವಾಳ ಪುರಸಭೆ ಯಲ್ಲಿ ಕಳೆದ ಎರಡೂ ವರೆ ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದ ರೇಖಾ ಜೆ. ಶೆಟ್ಟಿ ಅವರು ಕಾರ್ಕಳಕ್ಕೆ ವರ್ಗಾವಣೆಗೊಂಡು, ಸೆ. 26ರಂದು ಬಂಟ್ವಾಳ ಪುರಸಭೆಯಿಂದ ನಿರ್ಗಮಿಸಿದ್ದಾರೆ. ಅವರು ನಿರ್ಗಮಿಸುವ ಸಂದರ್ಭದಲ್ಲಿ ಪುರಸಭೆಯ ವ್ಯವಸ್ಥಾಪಕಿ ಲೀಲಾವತಿಯವರಿಗೆ ಚಾರ್ಜ್‌ ನೀಡಿದ್ದು, ಬೇರೆಡೆಯಿಂದ ಯಾರೂ ಪ್ರಭಾರ ನೆಲೆಯಲ್ಲಿಯೂ . ಆಗಮಿಸಿಲ್ಲ.

ಆಡಳಿತ ವ್ಯವಸ್ಥೆ ಯಿಲ್ಲದೆ ಅಧ್ಯಕ್ಷರು ಇಲ್ಲದಿದ್ದು, ಪ್ರಸ್ತುತ ಆಡಳಿತಾಧಿಕಾರಿಯಾಗಿ ಮಂಗಳೂರು . ಸಹಾಯಕ ಕಮಿಷನರ್‌ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈಗ ಮುಖ್ಯಾ ಧಿಕಾರಿ ಹುದ್ದೆಯನ್ನೂ ಇತರರು ನಿರ್ವಹಿಸುವಂತಾಗಿದೆ.

ಪ್ರಭಾರ ನೇಮಕದ ಜವಾಬ್ದಾರಿಯನ್ನು ಜಿಲ್ಲಾ ನಗರ ಯೋಜನ ನಿರ್ದೇಶಕರ ಕಚೇರಿ ನಿರ್ವಹಿಸುತ್ತದೆ. ಆದರೆ ಪ್ರಸ್ತುತ ರೇಖಾ ಜೆ. ಶೆಟ್ಟಿ ಅವರೇ ಚಾರ್ಜ್‌ ನೀಡಿರುವ ಲೀಲಾವತಿ ಪ್ರಭಾರ ನೆಲೆಯಲ್ಲಿದ್ದಾರೆ. ಅವರೇ ಪ್ರಭಾರ ಅಧಿಕಾರಿಗೆ ಜವಾಬ್ದಾರಿ ನೀಡಿರುವುದರಿಂದ ನಾವು ಬೇರೆ ಅಧಿಕಾರಿಗೆ ಜವಾಬ್ದಾರಿ ನೀಡಬೇಕಿಲ್ಲ ಎಂದು ನಗರ ಯೋಜನ ನಿರ್ದೇಶಕರ ಕಚೇರಿ ಅಧಿಕಾರಿಗಳು ಹೇಳುತ್ತಾರೆ....

ಫೋಟೋ - http://v.duta.us/PCCXwgEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eWJlJgAA

📲 Get Dakshina Kannada News on Whatsapp 💬