ಆನಂದ ಮಹಲ್‌ಗೆ ಬೆಳಕಿನ ಸಿಂಗಾರ

  |   Bijapur-Karnatakanews

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಾಯಕಲ್ಪ ದೊರೆಯುತ್ತಿದ್ದು, ಐತಿಹಾಸಿಕ ಆನಂದ ಮಹಲ್‌ ಸ್ಮಾರಕಕ್ಕೆ ರಾತ್ರಿ ವೇಳೆ ವರ್ಣರಂಜಿತ ಬೆಳಕಿನ ವ್ಯವಸ್ಥೆ ಮಾಡಲು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೀಗಾಗಿ ಭವಿಷ್ಯದಲ್ಲಿ ಈ ಸ್ಮಾರಕಕ್ಕೆ ನಿತ್ಯವೂ ವರ್ಣಮಯ ಬೆಳಕಿನ ವ್ಯವಸ್ಥೆ ಮಾಡಲು ಯೋಜಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆಯ ದುರವಸ್ಥೆ ಕುರಿತು ಸಾರ್ವಜನಿಕವಾಗಿ ಬೆಳಕು ಚಲ್ಲಿ, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನ ಸೆಳೆಯುವುದಕ್ಕಾಗಿ ಉದಯವಾಣಿ ಪತ್ರಿಕೆ "ಪ್ರವಾಸೋದ್ಯಮ ಕಥೆ-ವ್ಯಥೆ' ಹೆಸರಿನಲ್ಲಿ ಸರಣಿ ಲೇಖನ ಅಭಿಯಾನ ಆರಂಭಿಸಿದೆ.

ಇದರ ಭಾಗವಾಗಿ "ಐತಿಹಾಸಿಕ ಸ್ಮಾರಕ ಅತಿಕ್ರಮಿಸಿದ ಸರ್ಕಾರಿ ಕಚೇರಿಗಳು' ಶೀರ್ಷಿಕೆಯಲ್ಲಿ ಉದಯವಾಣಿ ಪತ್ರಿಕೆ ಆಗಸ್ಟ್‌ 6ರಂದು ವಿಶೇಷ ವರದಿ ಪ್ರಕಟಿಸಿತ್ತು. ಸ್ಮಾರಕದ ದುಸ್ಥಿತಿ ಕುರಿತು ವರದಿ ಬಳಿಕ ಆನಂದ ಮಹಲ್‌ ತನ್ನ ಗತ ವೈಭವದ ಮೆರುಗು ಪಡೆಯಲು ಸಿದ್ಧವಾಗುತ್ತಿದೆ. ಸಾರ್ವಜನಿಕರಿಗೆ ಐತಿಹಾಸಿಕ ಆಸ್ತಿ ಹಾಗೂ ಸ್ಮಾರಕಗಳ ಸಂರಕ್ಷಣೆ ಕುರಿತು ಪಾಠ ಮಾಡಬೇಕಾದ ಸರ್ಕಾರ ತನ್ನ ಇಲಾಖೆಗಳಿಗೆ ಕಚೇರಿ ಕಟ್ಟಿಕೊಡುವ ಹಾಗೂ ಅಧಿಕಾರಿಗಳಿಗೆ ನಿವಾಸದ ವ್ಯವಸ್ಥೆ ಮಾಡಿಕೊಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ವಿಜಯಪುರ ನಗರದಲ್ಲಿರುವ ಹಲವು ಸ್ಮಾರಕಗಳು ಪ್ರವಾಸಿಗರ ವೀಕ್ಷಣಾ ತಾಣಗಳಾಗುವ ಬದಲು ಸರ್ಕಾರಿ ಅತಿಕ್ರಮಣ ತಾಣಗಳಾಗಿ ಹಾಳಾಗುತ್ತಿವೆ ಎಂದು ಪತ್ರಿಕೆ ಬೆಳಕು ಚಲ್ಲಿತ್ತು....

ಫೋಟೋ - http://v.duta.us/pupPgwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/c7QgPgAA

📲 Get Bijapur Karnataka News on Whatsapp 💬