ಕಾಟಾಚಾರಕ್ಕೆ ಉಪಗ್ರಹ ಆಧಾರಿತ ತರಬೇತಿ

  |   Mysorenews

ಹುಣಸೂರು: ಸರ್ಕಾರದ ನಮ್ಮ ಗ್ರಾಮ ನಮ್ಮ ಯೋಜನೆಯ ಅನುಷ್ಠಾನ ಕುರಿತು ಮಿಶನ್‌ ಅಂತ್ಯೋದಯ ಯೋಜನೆಯಡಿ ಗ್ರಾಪಂ ಪ್ರತಿನಿಧಿಗಳಿಗೆ ಆಯೋಜಿಸಿರುವ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಟಿವಿ ಪರದೆಯಲ್ಲಿನ ಸಿನಿಮಾದಂತಾಗಿದ್ದು, ಕಾಟಾಚಾರಕ್ಕೆ ಎಂಬಂತೆ ನಡೆಸಲಾಗುತ್ತಿದೆ. ಸರ್ಕಾರದ ಹಣ ಲೂಟಿ ಮಾಡುವ ದಂಧೆಯಾಗಿದೆ.

ಹುಣಸೂರು ತಾಲೂಕಿನ ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಕಳೆದ ಒಂದು ವಾರದಿಂದ ಆಯೋಜನೆ ಮಾಡಿರುವ ತಾಲೂಕು ಆಡಳಿತ ಹಾಗೂ ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಇನ್ನು ಕೇವಲ ಮೂರು ತಿಂಗಳ ಅಧಿಕಾರಾವಧಿ ಮಾತ್ರ ಇದ್ದು, ಲಕ್ಷಾಂತರ ರೂ. ಹಣ ಖರ್ಚುಮಾಡಿ ಇಂತ ಅವೈಜ್ಞಾನಿಕ ತರಬೇತಿಗೆ ಮುಂದಾಗಿರುವುದು ಆಶ್ಚರ್ಯವೆನಿಸಿದೆ.

ಪ್ರತಿದಿನ ಎರಡು ತಂಡಗಳಾಗಿ ಮೂರ್‍ನಾಲ್ಕು ಗ್ರಾಪಂಗಳಿಂದ ಪ್ರತ್ಯೇಕವಾಗಿ ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಭಾಗವಹಿಸಬೇಕಾದ ಈ ತರಬೇತಿಗೆ ಕೇವಲ ನಾಲೈದು ಮಂದಿ ಸದಸ್ಯರು ಮಾತ್ರ ಭಾಗವಹಿಸುತ್ತಿದ್ದಾರೆ. ಇದು ವ್ಯವಸ್ಥೆಯ ಧ್ಯೋತಕವೋ, ಅಧಿಕಾರಿಗಳ ನಿರ್ಲಕ್ಷ್ಯವೋ, ಅಸಡ್ಡೆಯೋ ತಿಳಿಯದಾಗಿದೆ. ತರಬೇತಿ ನಡೆಯುವ ಮಧ್ಯ ಎದ್ದು ಹೋಗುವುದು ಸಾಮಾನ್ಯವಾಗಿದ್ದು, ಕಾರ್ಯಕ್ರಮದ ಸಾರ್ಥಕತೆಯೇ ಇಲ್ಲದಂತಾಗಿದೆ....

ಫೋಟೋ - http://v.duta.us/kcIKMwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NRLhVAAA

📲 Get Mysore News on Whatsapp 💬