ಪ್ರತ್ಯೇಕ ಪಥದ ಬಸ್‌ನಲ್ಲಿ ಹೈಟೆಕ್‌ ಕ್ಯಾಮೆರಾ

  |   Bangalore-Citynews

ಬೆಂಗಳೂರು: ನಗರದ ಹೊರವರ್ತುಲ ರಸ್ತೆ ಸಿಲ್ಕ್ಬೋರ್ಡ್‌ ಜಂಕ್ಷನ್‌-ಬೈಯಪ್ಪನಹಳ್ಳಿ ನಡುವೆ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಬಸ್‌ ಪಥದಲ್ಲಿ ಇತರೆ ವಾಹನಗಳು ನುಗ್ಗದಂತೆ ನಿಗಾ ಇಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಆಟೋಮೆಟಿಕ್‌ ಆಗಿ ಚಿತ್ರಗಳನ್ನು ಸೆರೆಹಿಡಿದು ರವಾನಿಸುವ ಸೆನ್ಸರ್‌ ಆಧಾರಿತ ಸಿಸಿಟಿವಿಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.

ಈ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ರಾಬರ್ಟ್‌ ಬಾಷ್‌ ಸೆಂಟರ್‌ ಫಾರ್‌ ಸೈಬರ್‌ ಫಿಸಿಕಲ್‌ ಸಿಸ್ಟಮ್ಸ್‌ ಜತೆ ಬಿಎಂಟಿಸಿ ಚರ್ಚೆ ನಡೆಸಿದ್ದು, ಸಂಸ್ಥೆಯ ನೆರವಿನಿಂದ ಪ್ರತ್ಯೇಕ ಪಥದಲ್ಲಿ ಭವಿಷ್ಯದಲ್ಲಿ ಬಸ್‌ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಶಿಸ್ತು ಕಾಯ್ದುಕೊಳ್ಳಲು ಈ ಚಿತ್ರಗಳನ್ನು ವಿಶ್ಲೇಷಣೆ ಮಾಡಿ, ರವಾನಿಸುವ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆ ಇದೆ.

ಪ್ರಸ್ತುತ ಬಸ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳು ಕೇವಲ ದೃಶ್ಯಗಳನ್ನು ಸೆರೆಹಿಡಿಯುತ್ತವೆ. ನಂತರ ಯಾವುದಾದರೂ ದೂರುಗಳು ಬಂದರೆ, ಅದರಲ್ಲಿರುವ ವೀಡಿಯೊ ತುಣುಕುಗಳನ್ನು ಪರಿಶೀಲಿಸಲಾಗುತ್ತದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಇದರ ನಿರ್ವಹಣೆ ಆಗುತ್ತಿಲ್ಲ. ಈಗ ಅಳವಡಿಸಲು ಚಿಂತನೆ ನಡೆಸಿರುವ ಸಿಸಿಟಿವಿ ಈಗಾಗಲೇ ಇರುವ ವ್ಯವಸ್ಥೆಯ ಮುಂದುವರಿದ ಭಾಗವಾಗಿವೆ....

ಫೋಟೋ - http://v.duta.us/JV6BjwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/XVeOPwAA

📲 Get Bangalore City News on Whatsapp 💬