ಬಂಡೀಪುರ: ಯಥಾಸ್ಥಿತಿ ಕಾಪಾಡಲು ಆಗ್ರಹ

  |   Chamarajanagarnews

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ತಮಿಳುನಾಡು ಮತ್ತು ಕೇರಳದ ಹೆದ್ದಾರಿಯಲ್ಲಿ ಹಗಲು ಸಂಚಾರ ನಿರ್ಭಂದಿಸದಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕರ್ನಾಟಕ ಗಡಿ ಭಾಗವಾದ ಮದ್ದೂರು ಚೆಕ್‌ಪೋಸ್ಟ್‌ ಸಮೀಪ ಪ್ರತಿಭಟನೆ ನಡೆಸಿದರು. ಪಟ್ಟಣದಿಂದ ವಾಹನಗಳ ಮೂಲಕ ಸಾಗಿದ ಪದಾಧಿಕಾರಿಗಳು ಮದ್ದೂರು ಚೆಕ್‌ಪೋಸ್ಟ್‌ ಮುಂಭಾಗ ಸಮಾವೇಶಗೊಂಡು ಕೆಲಕಾಲ ರಸ್ತೆ ತಡೆ ನಡೆಸಿ, ಸುಪ್ರೀಂ ಕೋರ್ಟ್‌ ಹೆದ್ದಾರಿ ಬಂದ್‌ ಮಾಡುವ ಬಗ್ಗೆ ಆದೇಶ ನೀಡುವ ಮೊದಲು ಪರಿಶೀಲನೆ ನಡೆಸಲಿ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಘೋಷಣೆ ಕೂಗಿದರು.

ಸಾವಿರಾರೂ ರೈತರಿಗೆ ಅನ್ಯಾಯ: ನಂತರ ಕಾವಲುಪಡೆ ಅಧ್ಯಕ್ಷ ಅಬ್ದುಲ್‌ ಮಾಲೀಕ್‌ ಮಾತನಾಡಿ, ಕೇರಳ ಮತ್ತು ತಮಿಳುನಾಡಿಗೆ ಹೆದ್ದಾರಿ ಮೂಲಕ ಪಟ್ಟಣದ ಮಾರುಕಟ್ಟೆಯಿಂದ ತರಕಾರಿ ಮತ್ತಿತರೆ ಸಾಮಗ್ರಿಗೆ ಹೋಗುತ್ತದೆ. ಈ ರಸ್ತೆಯನ್ನು ವನ್ಯಜೀವಿಗಳ ಸಂಚಾರಕ್ಕೆ ತೊಂದರೆ ಯಾಗುತ್ತದೆ ಎಂದು ಹಗಲು ಬಂದ್‌ ಮಾಡಿದರೆ ಸಾವಿರಾರು ರೈತರು ಮತ್ತು ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಈಗಾಗಲೇ ರಾತ್ರಿ 9 ರಿಂದ ಮುಂಜಾನೆ 6ರ ವರೆಗೆ ಸಂಚಾರ ನಿರ್ಭಂದಿಸಲಾಗಿದೆ ಎಂದರು....

ಫೋಟೋ - http://v.duta.us/N2UWLgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/afjCbgAA

📲 Get Chamarajanagar News on Whatsapp 💬