ರಾಮಾಯಣ ಸನ್ಮಾರ್ಗದ ಕಡೆಗೆ ನಡೆಸುವ ಗ್ರಂಥ

  |   Bangalore-Ruralnews

ದೇವನಹಳ್ಳಿ: ಮರ್ಹಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಮಾನವ ಕುಲವನ್ನು ಸನ್ಮಾರ್ಗದ ಕಡೆಗೆ ನಡೆಸುವಂತಹ ಗ್ರಂಥವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರಾಮಾಯಣವನ್ನು ತಿಲಿದುಕೊಳ್ಳಬೇಕು ಎಂದು ಜಿಪಂ ಸದಸ್ಯ ಜಿ.ಲಕ್ಷ್ಮೀ ನಾರಾಯಣ್‌ ತಿಳಿಸಿದರು.

ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಲ್ಲೂರು ಗ್ರಾಪಂ ಆವರಣದಲ್ಲಿ ವಾಲ್ಮೀಕಿ ಜಯತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮಾಯಣ ಗ್ರಂಥ ಆದರ್ಶ ನಾಯಕನಲ್ಲಿ ಇರಬೇಕಾದಂತಹ ಗುಣ, ಕುಟುಂಬದ ಆದರ್ಶಮಯವಾದ ಜೀವನ ತೋರಿಸುವಂತಹ ಕೃತಿಯಾಗಿದೆ. ಮರ್ಹಷಿ ವಾಲ್ಮೀಕಿಯವರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವ ಕುಲಕ್ಕೆ ಒಂದು ವರದಾನವಾಗಿದ್ದಾರೆ. ಇಂತಹ ಮಹನೀಯವರನ್ನು ಪ್ರತಿಯೊಬ್ಬರು ಗೌರವಿಸಬೇಕೆಂದರು.

ಭೂತ, ವರ್ತಮಾನ, ಭವಿಷ್ಯತ್‌ಗಳಿಗೆ, ಅವರ ವಿಚಾರ ಧಾರೆಗಳು ಪಸರಿಸುವಷ್ಟರ ಮಟ್ಟಿಗೆ ಜಗತ್ತು ನಮ್ಮ ದೇಶದ ಸಂಸ್ಕೃತಿ ಕಡೆಗೆ ಚಕಿತರಾಗಿ ಕಾದು ನೋಡುವಂತಾಗುವುದಕ್ಕೆ ಮಹರ್ಷಿ ವಾಲ್ಮೀಕಿರವರು ಕಾರಣಕರ್ತರಾಗಿದ್ದು, ಪ್ರಸ್ತುತ ಅಳವಡಿಸಿಕೊಂಡಿರುವ ವೈಮಾನಿಕ ಆವಿಷ್ಕಾರಗಳಂತಹ ಎಷ್ಟೋ ವೈಜ್ಞಾನಿಕ ಸಂಶೋಧನೆಗಳ ರೂಪದ ಕಲ್ಪನೆಗಳು ಸಾಕಾರಗೊಂಡು ಜಗತ್ತಿಗೆ ಶೈಕ್ಷಣಿಕ ಪಾಠವನ್ನು ನಮ್ಮ ದಾರ್ಶನಿಕ ವಾಲ್ಮೀಕಿ ಮಹರ್ಷಿಗಳು ತಿಳಿಸಿದ್ದಾರೆ ಎಂದರು.

ತಾಪಂ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್‌ ಮಾತನಾಡಿ, ಶ್ರೀರಾಮನ ಮಕ್ಕಳಾದ ಲವ ಕುಶರಿಗೆ ವಿದ್ಯಾದಾನ ಮಾಡಿದ ಕೀರ್ತಿ ವಾಲ್ಮೀಕಿ ಮರ್ಹಷಿ ಸಲ್ಲಿಸಬೇಕೆಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಕೆಂಪೇಗೌಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು, ಜಾತ್ಯಾತೀತವಾಗಿರುವ ರಾಮಾಯಣ ಗ್ರಂಥವನ್ನು ಜಗತ್ತಿಗೆ ಉಣಬಡಿಸಿ ಮಾದರಿಯಾಗಿದ್ದಾರೆ. ರಾಮಾಯಣ ಓದುತ್ತಿದ್ದರೆ, ಎಲ್ಲಾ ಮಾನವಿಕ ಶಾಸ್ತ್ರಗಳ ಪರಿಚಯವಾಗುತ್ತದೆ ಎಂದರು....

ಫೋಟೋ - http://v.duta.us/7gZGPwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IKG0qwAA

📲 Get Bangalore Rural News on Whatsapp 💬