ವಕೀಲರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

  |   Dharwadnews

ಧಾರವಾಡ: ನ್ಯಾಯವಾದಿ ಯಲ್ಲಪ್ಪ ಬೆಳ್ಳಕ್ಕಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧಾರವಾಡ ವಕೀಲರ ಸಂಘದಿಂದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇದಕ್ಕೂ ಮುನ್ನ ಸಂಘದಲ್ಲಿ ಚರ್ಚಿಸಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಕೋರ್ಟ್‌ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ಕೈಗೊಂಡ ನ್ಯಾಯವಾದಿಗಳು, ಬಳಿಕ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದೂರು ದಾಖಲಿಸಲು ಹೋದಾಗ ಉಪನಗರ ಠಾಣೆ ಅಧಿಕಾರಿಗಳು ಹಲ್ಲೆ ಮಾಡಿದವರೊಂದಿಗೆ ಶಾಮೀಲಾಗಿ ರಾಜಿ ಮಾಡಿಕೊಳ್ಳಲು ಸೂಚಿಸಿದ್ದರು. ಅಲ್ಲದೆ ಪಿಎಸ್‌ಐ ಶರಣಬಸವ ನಾಡಗೌಡ ಎಂಬುವರು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿ ಅವಮಾನಿಸಿದ್ದಾರೆ. ಇಂತಹ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಡಿಸಿ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಎಸ್‌. ಗೋಡಸೆ, ಉಪಾಧ್ಯಕ್ಷ ರಾಜು ಕೋಟಿ, ಎನ್‌.ಆರ್‌. ಮಟ್ಟಿ, ಆಶೀಷ ಮಗದುಮ್ಮ, ಆರ್‌.ಯು. ಬೆಳ್ಳಕ್ಕಿ, ಪ್ರಕಾಶ ಭಾವಿಕಟ್ಟಿ, ರೂಪಾ ಕೆಂಗಾನೂರ, ಪ್ರಕಾಶ ಉಡಿಕೇರಿ, ಕೆ.ಎಚ್‌. ಪಾಟೀಲ, ಗಾಯಾಳು ಯಲ್ಲಪ್ಪ ಬೆಳಕ್ಕಿ ಹಾಗೂ ಸಂಘದ ಸದಸ್ಯ ವಕೀಲರು ಪಾಲ್ಗೊಂಡಿದ್ದರು.

ಫೋಟೋ - http://v.duta.us/86-O3AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8PiUqwAA

📲 Get Dharwad News on Whatsapp 💬