ವರದೆ ನೀಡಿದರೂ ಸಿಗದ ಫಲ

  |   Haverinews

ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ ಪಟ್ಟಣದ ಜನತೆ ಕುಡಿಯುವ ನೀರಿನಿಂದ ವಂಚಿತರಾಗುತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಪಟ್ಟಣದ ಜನತೆಗೆ ವರದಾ ನದಿಯ ನೀರು ಸರಬರಾಜು ಮಾಡುವ ಉದ್ದೇಶದಿಂದ ಚಾಲನೆ ನೀಡಲಾಗಿತ್ತು.

ಹಲಸೂರ ಹತ್ತಿರ ವರದಾ ನದಿ ದಡದಲ್ಲಿ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ನೀರನ್ನು ತವರಮೆಳ್ಳಿಹಳ್ಳಿ ಕೆರೆಗೆ ತುಂಬಿಸಿ ಅಲ್ಲಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದಿಂದ ಪೈಪ್‌ಲೈನ್‌ಗಳ ಮೂಲಕ ಬಂಕಾಪುರ ಪುರಸಭೆ ಹತ್ತಿರ ನಿರ್ಮಿಸಲಾದ ಟ್ಯಾಂಕ್‌ಗೆ ಸಿಪ್ಟ್ ಮಾಡಲಾಗಿತ್ತು. ಅಲ್ಲಿಂದ ಪಟ್ಟಣದ ಜನತೆಗೆ ನಳದ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಬೊಮ್ಮಾಯಿ ಅವರು ಪಟ್ಟಣದ ಜನತೆಗೆ ಒದಗಿಸಿದ್ದಕ್ಕೆ ಸಾರ್ವಜನಿಕ ವಲಯದಿಂದ ಅಭಿನಂದನಾ ಮಹಾಪೂರವೇ ಹರಿದು ಬಂದಿತ್ತು. ಆದರೆ ಇದು ಬಹಳ ದಿನಗಳವರೆಗೆ ಉಳಿಯಲಿಲ್ಲ. ಕೆಲವು ದಿನಗಳಕ್ಕೆ ಕಮರಿತು. ಹೊಳೆಯ ನೀರನ್ನು ಜನತೆಗೆ ಪೂರೈಸಿದ ಪುರಸಭೆ ಆಡಳಿತ ಬೇಸಿಗೆಯಲ್ಲಿ ಹೊಳೆಯ ನೀರು ಖಾಲಿಯಾಗಿದೆ ಎಂಬ ನೆ ಹೇಳಿ ನೀರು ಪೂರೈಕೆ ಸ್ಥಗಿತಗೊಳಿಸಿತ್ತು....

ಫೋಟೋ - http://v.duta.us/7R7SPgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/mWCP7gAA

📲 Get Haveri News on Whatsapp 💬