ಇನ್ನಯಾರನ್ನ ಮಕ್ಕಳಂತಕರಿಲೋದೇವ್ರ..

  |   Koppalnews

ಕೊಪ್ಪಳ: ನನ್ನ ಮಕ್ಳು ಸಾಲಿ ಚೋಲೋ ಕಲೀಲಿ ಅಂತಾ ಕಷ್ಟ ಪಟ್ಟಿದ್ನಲ್ಲೋ ನನ್ನ ಮಗಳಾ.. ಮೊನ್ನೆರ ಹೊಸ ಬಟ್ಟಿ ಹೊಲಿಸ್ಕೊಂಡು ಕಾಲೇಜಿಗೆ ಹೋಕ್ಕಿನಿ ಅಂದಿದ್ದೆಲ್ಲೋ ನನ್ನವ್ವಾ..ಆ ಹೊಸ ಬಟ್ಟಿ ಈಗ ಯಾರ್ಗೆ ಕೊಡೊಲ್ಲೋ ಏ ಯವ್ವಾ..ನನ್ನ ಒಬ್ಟಾತನ್ನ ಬಿಟ್ಟ ಹೋದ್ರೆಲ್ಲೋ ನನ್ನ ಮಕ್ಕಳ..ಇನ್ನ ನಾ ಯಾರನ್ನ ಮಕ್ಕಳಂತ ಕರಿಲೋ ಏ ನನ್ನವ್ವ..ಇನ್ನ ನಾನಾದ್ರೂ ಯಾಕ ಜೀವ ಇಡೊಲ್ಲೋ ಏ ಯವ್ವಾ... ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ತನ್ನ ಮೂರು ಮಕ್ಕಳನ್ನ ಕಳೆದಕೊಂಡ ಯಲಮಗೇರಿಯ ಸೋಮಣ್ಣ ಕುದರಿಮೋತಿ ಅವರ ಆಕ್ರಂದನ ನುಡಿಗಳು ನೆರೆದವರ ಕರಳು ಚುರಕ್‌ ಎನ್ನುವಂತಿದ್ದವು.

ನಾ ಒಬ್ನ ಏನ್‌ ಮಾಡ್ಲೋ ದೇವ್ರೇ : ಯವ್ವಾ..ನೀವು ಎಲ್ರೂ ಹೋದ್ರ ನನ್ನ ನೋಡೋರು ಯಾರೂ ಇಲ್ದಂಗಾತಲ್ಲೋ ಯವ್ವಾ..ನನ್ನ ಒಬ್ಟಾತನ್ನ ಬಿಟ್ಟು ಹೋಗಿರಲ್ಲೋ ಯವ್ವಾ..ಅಪ್ಪಾಜಿ ಅಪ್ಪಾಜಿ ಅಂತಿದ್ರಲ್ಲೋ..ಇನ್ನ ನಾನು ಯಾರನ್ನ ಮಕ್ಕಳಂತಾ ಕರಿಲೋ ನನ್ನ ಕೂಸೇ..ಆ ದೇವ್ರ ನನ್ನ ಮನಿಗೆ ಕತ್ಲ ಮಾಡ್ಯಾನೋ..ನನ್ನ ಮನಿಗೇ ಬೆಳಕ್‌ ಇಲ್ದಂಗ ಮಾಡಿದ್ನಲ್ಲೋ..ಇನ್ನ ಈ ಜೀವನಾಗ ಏನೈತೋ ದೇವ್ರೇ..ಎಂದು ಸೋಮಣ್ಣ ಗೋಗರೆದರು. ಮನೆ ಮೇಲ್ಛಾವಣಿ ಕುಸಿತದಿಂದ ಮೂವರು ಮಕ್ಕಳನ್ನು ಕಳೆದುಕೊಂಡ ಸೋಮಣ್ಣನವರ ಜೀವನದ ಸ್ಥಿತಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕಿದರು.ಆ ದೇವ್ರು ಮಕ್ಕಳ ಮುಖವನ್ನೂ ಕಣ್ತೆರೆದು ನೋಡ್ಲಿಲ್ಲ. ಆ ದೇವ ಎಂಥಾ ಕ್ರೂರಿ.. ಎಂದು ಜನ ಕಣ್ಣೀರು ಹಾಕುತ್ತಲೇ ಶಪಿಸಿದರು....

ಫೋಟೋ - http://v.duta.us/cBdZ_QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/fcRmkgAA

📲 Get Koppal News on Whatsapp 💬