ಕಾಲಮಿತಿಯಲ್ಲಿ ಕೆಲಸ ನಿರ್ವಹಿಸಿ

  |   Bangalore-Ruralnews

ದೇವನಹಳ್ಳಿ: ಕಾನೂನು ಬದ್ಧವಾಗಿ ಸಾರ್ವಜನಿಕ ಕೆಲಸವನ್ನು ನಿಗದಿತ ವೇಳೆಯಲ್ಲಿ ಮಾಡಿಕೊಡದೆ ವಿನಾಃಕಾರಣ ಜನರನ್ನು ಅಲೆದಾಡಿಸುವುದು ಕಾನೂನು ಅಪರಾದ ಎಂದು ಪರಿಗಣಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಶಶಿಕಲಾ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬೆಂ.ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ವತಿಯಿಂದ ಜನ ಸಂಪರ್ಕ ಸಭೆಯಲ್ಲಿ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಮಾತನಾಡಿದರು.

ಯಾವುದೇ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡಿದ್ದಲ್ಲಿ ನಿರ್ಭಯವಾಗಿ ದೂರನ್ನು ನೀಡಬಹುದು. 12 ಪ್ರಕರಣಗಳ ದೂರು ಬಂದಿದ್ದು, ಅದರಲ್ಲಿ 8 ಕಂದಾಯ ಇಲಾಖೆ, 3 ಪಂಚಾಯತ್‌ ರಾಜ್‌ ಇಲಾಖೆ, ವಿಜಯಪುರ ಪುರಸಭೆ 1 ಪ್ರಕರಣ ಬಂದಿರುತ್ತದೆ. ಅಧಿಕಾರಿಗಳು ನಿಗದಿತ ವೇಳೆಯಲ್ಲಿ ಜನರ ದೂರುಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ದೂರುದಾರ ರಾಯಸಂದ್ರ ಸೋಮಶೇಖರ್‌ ಮಾತನಾಡಿ, ಕಸಬಾ ಹೋಬಳಿ ರಾಯಸಂದ್ರ ಗ್ರಾಮದ ಸರ್ವೆ ನಂ.44ರ ಸುಮಾರು 157 ಎಕರೆ ಸರ್ಕಾರಿ ಭೂಮಿಯನ್ನು ಈಗಾಗಲೇ ಭೂ ಮಂಜೂರಾತಿ ಮಾಡಿ. ಹಂಚಿಕೆಯ ನಂತರ ಉಳಿಕೆ ಜಮೀನನ್ನು ಸರ್ಕಾರದ ವತಿಯಿಂದ ಸಂಪೂರ್ಣ ಸರ್ವೆ ಮಾಡಿ, ರೆವೆನ್ಯೂ ಮಹಜರು ನಡೆಸಿ ಅಕ್ರಮ ಭೂ ಕಬಳಿಕೆದಾರರನ್ನು ಗುರ್ತಿಸಿ ವಿಚಾರಣೆಗೆ ಒಳಪಡಿಸಿ ಉಳಿಕೆ ಸರ್ಕಾರಿ ಭೂಮಿಯನ್ನು ಯಥಾವತ್ತಾಗಿ ರಾಯಸಂದ್ರ ಗ್ರಾಮದ ಅಭಿವೃದ್ಧಿಗೆ ಮತ್ತು ವಸತಿ ಹೀನರಿಗೆ ಹಾಗೂ ಇನ್ನಿತರ ಸಾರ್ವಜನಿಕ ಹಿತಾಸಕ್ತಿಗೆ ಭೂಮಿಯನ್ನು ಬಳಸಿಕೊಳ್ಳಬೇಕು. ಹಾಗೂ ಸರ್ಕಾರಿ ಭೂಮಿ ಎಂದು ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು....

ಫೋಟೋ - http://v.duta.us/1AHz9QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-bZ_ygAA

📲 Get Bangalore Rural News on Whatsapp 💬