ಕೈ ಹಿರಿಯರ ಮುನಿಸು

  |   Karnatakanews

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕರೆದಿದ್ದ ಸಭೆಗೆ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸಿದ್ದ ರಾಮಯ್ಯ ನೇಮಕಕ್ಕೆ ಹಿರಿಯ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಅವರನ್ನೇ ನೇಮಿಸಿದ್ದು ಹಿರಿಯರ ಅಸಮಾಧಾನಕ್ಕೆ ಕಾರಣ ವಾಗಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ವೇಣುಗೋಪಾಲ್‌ ಕರೆದಿದ್ದ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದರು. ಹಿರಿಯ ನಾಯಕ ರಾದ ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌, ಮಾಜಿ ಸಚಿವ ಎಚ್‌.ಕೆ. ಪಾಟೀಲ್‌, ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಸಭೆಯಿಂದ ದೂರ ಉಳಿದ ಪ್ರಮುಖರು.

ವೇಣುರಿಂದಲೂ ಅಂತರ

ಸಿದ್ದರಾಮಯ್ಯ ಪಕ್ಷದಲ್ಲಿ ಏಕಾಂಗಿಯಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡು ಹಿರಿಯ ನಾಯಕ ರನ್ನು ಅವಗಣಿಸುತ್ತಿದ್ದಾರೆ ಎಂಬುದು ಇವರ ಆರೋಪ. ಜತೆಗೆ ಕೆ.ಸಿ. ವೇಣು ಗೋಪಾಲ್‌ ಕೂಡ ಸಿದ್ದ ರಾಮಯ್ಯ ಪರ ವಾಗಿದ್ದಾರೆ ಎಂದು ಅವರಿಂದ ಅಂತರ ಕಾಯ್ದು ಕೊಂಡಿದ್ದರು. ಈಗ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಿ ಅವರ ನೇತೃತ್ವ ದಲ್ಲೇ ಉಪ ಚುನಾವಣೆ ಸಭೆ ಗಳನ್ನು ಮಾಡು  ತ್ತಿರುವುದರಿಂದ ಹಿರಿಯ ನಾಯ ಕರು ಸಭೆಯಿಂದ ದೂರ ಉಳಿದರು ಎಂದು ಹೇಳಲಾಗುತ್ತಿದೆ....

ಫೋಟೋ - http://v.duta.us/19vd8wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/tyflOgAA

📲 Get Karnatakanews on Whatsapp 💬