ಜನಪ್ರತಿನಿಧಿಗಳ ನಿಲುವು ಸ್ಪಷ್ಟಪಡಿಸಲು ಆಗ್ರಹ

  |   Uttara-Kannadanews

ಹೊನ್ನಾವರ: ಜಿಲ್ಲೆಯ ಬಿಜೆಪಿ, ಕಾಂಗ್ರೆಸ್‌ ಶಾಸಕರು, ಸಂಸದರು ಅರಣ್ಯ ಭೂಮಿ ಸಾಗುವಳಿದಾರರ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ವಿಧಾನಸಭೆ, ಲೋಕಸಭೆಗಳಲ್ಲಿ ಸೊಲ್ಲೆತ್ತುತ್ತಿಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲು ತೊಡಗಿ ವಾರಕಳೆದಿದೆ.

ಜಾತಿ, ಧರ್ಮ, ಮೋದಿ ಹೆಸರಲ್ಲಿ ಮತ ಕೇಳಿದರು, ಮತ ಹಾಕಿದೆವು. ಇವರಿಂದ ಅಲ್ಲವಾದರೂ ರೈತಪರ ಹೋರಾಟಗಾರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಡವರ ಕುರಿತು ವಿಶೇಷ ಕಾಳಜಿ ಹೊಂದಿದ ಮೋದಿಯವರ ಸರ್ಕಾರದಿಂದ ತಮಗೆ ಭೂಮಿ ಹಕ್ಕು ದೊರೆಯಬಹುದು ಎಂದು ಆಸೆಯಿಂದಿರುವ ಜನರಿಗೆ ತೀವ್ರ ನಿರಾಸೆ ಉಂಟಾಗಿದೆ. ಈ ವರ್ಷದ ಮಳೆ 725 ಅತಿಕ್ರಮಣದಾರರ ಮನೆಯನ್ನು ತೊಳೆದುಕೊಂಡು ಹೋಗಿದೆ. 1830 ಹೆಕ್ಟೇರ್‌ ಭೂಮಿಯ ಬೆಳೆ ನಾಶವಾಗಿದೆ.

ಅವರಿಗೆ ಪರಿಹಾರವಿಲ್ಲ, ಮನೆ ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಬಿಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ, ಅರಣ್ಯ ಹಕ್ಕು ಕಾಯಿದೆಯಡಿ ಮಂಜೂರಿಗೆ ಸಂಬಂಧಪಟ್ಟಂತೆ ಪುನರ್‌ ಪರಿಶೀಲನಾ ವಿಧಾನವನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಬುಡಕಟ್ಟು ಮಂತ್ರಾಲಯ ಸೂಚಿಸಿದ ಮಾರ್ಗಸೂಚಿಯಂತೆ ನಿರ್ದಿಷ್ಟ ಕಾಲಮಾನದೊಳಗೆ ಮಂಜೂರಿ ಪ್ರಕ್ರಿಯೆಯನ್ನು ಯಾಕೆ ಜರುಗಿಸುತ್ತಿಲ್ಲ ಎಂಬ ಪ್ರಶ್ನೆಗೆ ಮೌನವೇ ಉತ್ತರ....

ಫೋಟೋ - http://v.duta.us/Co21rAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/6-kJAQAA

📲 Get Uttara Kannada News on Whatsapp 💬