ಜಿಲ್ಲಾಡಳಿತ ಭವನಕ್ಕೆ 150ರ ಸಂಭ್ರಮ

  |   Chitradurganews

ಚಿತ್ರದುರ್ಗ: ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿರುವ ಜಿಲ್ಲೆಯ ಆಡಳಿತ ಕಚೇರಿ ಜಿಲ್ಲಾಡಳಿತ ಭವನಕ್ಕೆ ಬರೋಬ್ಬರಿ 150 ವಸಂತಗಳ ಸಂಭ್ರಮ. 1869ರಲ್ಲಿ ನಿರ್ಮಾಣವಾದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದ್ದು, ಹೊಸದಾಗಿ ನಿರ್ಮಿಸಿದ ಕಟ್ಟಡಗಳನ್ನು ನಾಚಿಸುವಂತಿದೆ.

ಮೈಸೂರು ಅರಸರ ಆಡಳಿತ ವ್ಯಾಪ್ತಿಯಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಶತಮಾನ ಕಂಡ ಹಲವು ಕಟ್ಟಡಗಳಿವೆ. ಅವುಗಳಲ್ಲಿ ಜಿಲ್ಲಾಡಳಿತ ಭವನ ಕೂಡ ಒಂದು. ಈ ಕಟ್ಟಡಕ್ಕೆ 150 ವರ್ಷವಾಗಿದೆ ಎಂದು ಹೇಳಲಾಗದಷ್ಟು ಗಟ್ಟಿಯಾಗಿದೆ ಕಟ್ಟಡ.

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ (1799-1868) ಅ ಧಿಕಾರಾವಧಿಯಲ್ಲಿ ಸುಗಮ ಆಡಳಿತದ ಉದ್ದೇಶದಿಂದ ಮೈಸೂರು ರಾಜ್ಯವನ್ನು 6 ಫೌಜ್‌ದಾರ್‌ಗಳು, 101 ತಾಲೂಕುಗಳಾಗಿ ವಿಂಗಡಿಸಲಾಗಿತ್ತು. ಹಿಂದೆ "ಚಿತಲ್‌ಡ್ರುಗ್‌' ಎಂದು ಕರೆಯುತ್ತಿದ್ದ ಚಿತ್ರದುರ್ಗ ಕೂಡ ಪ್ರಮುಖ ಕೇಂದ್ರವಾಗಿತ್ತು. ಇದರ ವ್ಯಾಪ್ತಿಗೆ 13 ತಾಲೂಕುಗಳು ಸೇರಿದ್ದವು. 1862 ರಲ್ಲಿ ಬ್ರಿಟಿಷ್‌ ಸರ್ಕಾರ ಲಿವಿನ್‌ ಬೆಂಥೆಮ್‌ ಬೋರಿಂಗ್‌ ಅವರನ್ನು ಮೈಸೂರು ಕಮಿಷನರ್‌ ಆಗಿ ನೇಮಕ ಮಾಡಿತು. ಈ ವೇಳೆ ಮೈಸೂರು ರಾಜ್ಯವನ್ನು 8 ಜಿಲ್ಲೆಗಳಾಗಿ ವಿಂಗಡಣೆ ಮಾಡಲಾಗಿತ್ತು, ಇದರಲ್ಲಿ ಚಿತ್ರದುರ್ಗವೂ ಒಂದಾಗಿತ್ತು.

ನಂತರ ಇಡೀ ರಾಜ್ಯಕ್ಕೆ ಒಬ್ಬರೇ ಚೀಫ್‌ ಕಮಿಷನರ್‌ ಮತ್ತು ಪ್ರತಿ ಜಿಲ್ಲೆಗೆ ಡೆಪ್ಯೂಟಿ ಕಮಿಷನರ್‌ಗಳನ್ನು ನೇಮಿಸಲಾಯಿತು. ಇಂದಿಗೂ ಜಿಲ್ಲಾಧಿಕಾರಿಗಳನ್ನು ಡೆಪ್ಯೂಟಿ ಕಮಿಷನರ್‌ ಎಂದೇ ಕರೆಯಲಾಗುವುದನ್ನು ಗಮನಿಸಬಹುದು. 1869 ರಲ್ಲಿ "ಚಿತಲ್‌ಡ್ರುಗ್‌' ಅಂದರೆ ಈಗಿನ ಚಿತ್ರದುರ್ಗದಲ್ಲಿ ಆಗ ಡೆಪ್ಯೂಟಿ ಕಮಿಷನರ್‌ ಕಚೇರಿ ಕಟ್ಟಡವನ್ನು ನಿರ್ಮಿಸಲಾಯಿತು....

ಫೋಟೋ - http://v.duta.us/HfhjmgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/c1FFCwEA

📲 Get Chitradurga News on Whatsapp 💬