ಜೀವ ಉಳಿಸುವ ರಕ್ತ ವಿದಳನ ಘಟಕ

  |   Haverinews

ಹಾವೇರಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಕ್ತ ವಿದಳನ ಘಟಕ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾದಂತಾಗಿದೆ.

ಜಿಲ್ಲೆಯಲ್ಲಿ 2016ರಲ್ಲಿ ರಕ್ತ ನಿಧಿ ಕೇಂದ್ರ ಆರಂಭವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿತ್ತು. ಇದೀಗ ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿ ಅಂದಾಜು 56ಲಕ್ಷ ರೂ. ವೆಚ್ಚದಲ್ಲಿ ರಕ್ತ ವಿದಳನ ಘಟಕ ಸ್ಥಾಪಿಸಲಾಗಿದೆ.

ರಕ್ತ ವಿದಳನ ಘಟಕ ಮಂಜೂರು ಮಾಡುವಂತೆ 2017ರಲ್ಲಿಯೇ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2019ಕ್ಕೆ ಸರಕಾರದಿಂದ ಅನುಮತಿ ಸಿಕ್ಕಿದ್ದು, ಆಗಸ್ಟ್‌ 15ರಿಂದ ರಕ್ತ ವಿದಳನ ಘಟಕ ಸೇವೆ ನೀಡುತ್ತಿದೆ. ಘಟಕದಲ್ಲಿ ವೈದ್ಯರು, ಮೆಡಿಕಲ್‌ ಆಫೀಸರ್‌, ನರ್ಸ್‌, ವಾಹನ ಚಾಲಕ, ಸೇವಕ, ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 11ಜನರು ಕೆಲಸ ನಿರ್ವಹಿಸುತ್ತಿದ್ದಾರೆ.

ರಕ್ತ ವಿದಳನ ಘಟಕದಿಂದ ಬಿಪಿಎಲ್‌, ಥೆಲಾಸೆಮಿಯಾ, ಹಿಮೋಫೀಲಿಯಾ, ಎಚ್‌ಐವಿ, ಜೆಎಸ್‌ಎಸ್‌ಕೆ ರೋಗಿಗಳಿಗೆ ಉಚಿತ ರಕ್ತ ವಿತರಿಸಲಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉಳಿದ ರೋಗಿಗಳಿಗೆ ಸರಕಾರ ಆದೇಶದನ್ವಯ 350 ರೂ., ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ (ನ್ಯಾಟ್‌ ಟೆಸ್ಟ್‌ ಶುಲ್ಕದೊಂದಿಗೆ)2050 ರೂ., ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಇದ್ದರೂ ಏಲಿಜಾ ಟೆಸ್ಟ್‌ ಶುಲ್ಕ 995 ರೂ. ಇದೆ....

ಫೋಟೋ - http://v.duta.us/tkwKnQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/HLz20wAA

📲 Get Haveri News on Whatsapp 💬