ಡೆಂಘೀ ನಿಯಂತ್ರಣಕ್ಕೆ ಲಾರ್ವಾ ಸಮೀಕ್ಷೆ

  |   Gadagnews

ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ವತಿಯಿಂದ ಡೆಂಘೀ ನಿಯಂತ್ರಣಕ್ಕೆ ಲಾರ್ವಾ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಹಿರಿಯ ಆರೋಗ್ಯ ಸಹಾಯಕ ಮನೋಹರ ಕಣ್ಣಿ ಮಾತನಾಡಿ, ರಾಜೂರ ಗ್ರಾಮದಲ್ಲಿ ಹೆಚ್ಚುತ್ತಿರುವ ಜ್ವರಬಾಧೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸಮಿಕ್ಷೆಯಲ್ಲಿ ಗ್ರಾಮದಲ್ಲಿ 6 ಶಂಕಿತ ಡೆಂಘೀ, 3 ಟೈಫಾಯ್ಡ, 10 ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ನೀರು ತೆರೆದಿಡದಂತೆ ನೋಡಿಕೊಳ್ಳಬೇಕಿದೆ ಎಂದರು.

ಡಾ| ಮಹಾಂತೇಶ ಹಾದಿಮನಿ ಮಾತನಾಡಿ, ನಿಂತ ನೀರು ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಸಾರ್ವಜನಿಕರು ತಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಸಂಗ್ರಹಿಸಿದ ನೀರಿನ ಪರಿಕರಗಳನ್ನು ಭದ್ರವಾಗಿ ಮುಚ್ಚಿಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಲಲಿತಾ ಮಳಗಿ, ಪಿಡಿಒ ಬಿ.ಎನ್‌. ಇಟಗಿಮಠ, ಗ್ರಾಪಂ ಸದಸ್ಯ ಶರಣಪ್ಪ ಇಟಗಿ, ಆರೋಗ್ಯ ಇಲಾಖೆಯ ಡಾ| ಎಂ.ಬಿ. ಗಡ್ಡಿ, ಸುನೀಲ ಹಬೀಬ, ಪ್ರವೀಣ ರಾಠೊಡ, ಮಹೇಶ ಹಿರೇಮಠ, ವಹಿದಾ ನಮಾಜಿ, ಪದ್ಮಾವತಿ ದಿವಾಣದ, ಮಂಜು ವರಗಾ ಸೇರಿದಂತೆ ಇತರರಿದ್ದರು.

ಫೋಟೋ - http://v.duta.us/pwfh3AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/z5ogaAAA

📲 Get Gadag News on Whatsapp 💬