ನೂರಾರು ಎಕರೆ ಗೋಮಾಳ ಭೂಮಾಫಿಯಾಗೆ?

  |   Kolar-Karnatakanews

ಕೋಲಾರ: ತಾಲೂಕಿನ ಹೊಳಲಿ ಗ್ರಾಮದ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಜಾಗ ಹಸ್ತಾಂತರವಾಗುತ್ತಿದ್ದಂತೆಯೇ ಸುತ್ತಮುತ್ತಲ ನೂರಾರು ಎಕರೆ ಗೋಮಾಳ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ, ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ.

ಅಧಿಕಾರಿಗಳು ಮತ್ತು ಬೆಂಗಳೂರಿನ ಭೂಮಾಫಿಯಾ ವ್ಯಕ್ತಿಗಳು ಹೊಳಲಿ ಗೋಮಾಳ ಜಮೀನಿನ ಕಬಳಿಕೆಯಲ್ಲಿ ಭಾಗಿಯಾಗಿದ್ದು, ಸಾರ್ವಜನಿಕರಿಂದ ಬಂದ ದೂರುಗಳ ಮೇರೆಗೆ ಉಪವಿಭಾಗಾಧಿಕಾರಿ ಯವರು ಹೊಳಲಿ ಗ್ರಾಮದ ಸರ್ವೆ ಸಂಖ್ಯೆ 103ರ ಗೋಮಾಳ ಜಮೀನಿಗೆ ಸಂಬಂಧ ಪಟ್ಟಂತೆ ಸಮಗ್ರ ವರದಿ ನೀಡುವಂತೆ ತಹಶೀ ಲ್ದಾರ್‌ಗೆ ಪತ್ರ ಬರೆದು ಸೂಚಿಸಿದ್ದಾರೆ.

422 ಎಕರೆ ಗೋಮಾಳ: ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಸರ್ವೇ ಸಂಖ್ಯೆ 103ರ ವ್ಯಾಪ್ತಿಗೆ 422 ಎಕರೆ ಭೂಮಿಒಳಪಡುತ್ತದೆ. ಈ ಜಮೀನಿನಲ್ಲಿ ಸ್ವಲ್ಪ ಭಾಗವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲು ಮಂಜೂರು ಮಾಡುವಂತೆ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ ಐದಾರು ವರ್ಷಗಳಿಂದಲೂ ಪ್ರಯತ್ನ ಪಡುತ್ತಿದೆ. ಹೊಳಲಿ ಗೋಮಾಳ ಜಮೀನಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗುವುದರಿಂದ ಸುತ್ತಮುತ್ತಲ ಜಮೀನಿಗೆ ಬಂಗಾರದ ಬೆಲೆ ಬರುತ್ತದೆ ಎಂದು ನಿರೀಕ್ಷಿಸಿದ್ದ ಬೆಂಗಳೂರಿನ ಭೂಮಾಫಿಯಾದಾರರು, ಭೂಕಬಳಿಕೆಗಾಗಿ ತಮ್ಮೆಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ಭೂ ಮಂಜೂರಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭೂ ಮಾಫಿಯಾದ ಆಮಿಷಕ್ಕೆ ತುತ್ತಾಗಿದ್ದ ಕೋಲಾರ ತಾಲೂಕಿನ ಕೆಲವು ತಹಶೀಲ್ದಾರ್‌ಗಳು ಭೂಕಬಳಿಕೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಾಥ್‌ ನೀಡಿರುವ ಆರೋಪಗಳಿವೆ....

ಫೋಟೋ - http://v.duta.us/QMN6SAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1B3wTwAA

📲 Get Kolar Karnataka News on Whatsapp 💬