ನಲ್ಲಿ ನೀರಿನಲ್ಲಿ ಚರಂಡಿ ನೀರು, ಹುಳ ಕೂಡ ಬರುತ್ತೆ!

  |   Mysorenews

ಹುಣಸೂರು: ನಗರದ ಮೂರು ಬಡಾವಣೆಗಳಲ್ಲಿ ಕಳೆದ 15 ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಮನೆಗಳಿಗೆ ನಲ್ಲಿ ನೀರಿನೊಂದಿಗೆ ಚರಂಡಿ ನೀರು ಕೂಡ ಸರಬರಾಜಾಗುತ್ತಿದೆ. ಕೆಲ ಸಂದರ್ಭದಲ್ಲಿ ಹುಳಗಳು ಕೂಡ ನಲ್ಲಿಗಳಲ್ಲಿ ಉದರುತ್ತವೆ.

ಇದರಿಂದ ಹಲವಾರು ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ. ಆದರೂ ಕೂಡ ನಗರಸಭೆ ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಗರದ 8ನೇ ವಾರ್ಡ್‌ನ ಬ್ರಾಹ್ಮಣರ ಬಡಾವಣೆ, ಕಾಫಿವರ್ಕ್ಸ್ ರಸ್ತೆ, 11ನೇ ವಾರ್ಡ್‌ನ ಗಣೇಶ ಗುಡಿ ಬೀದಿ ನಿವಾಸಿಗಳೇ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಕಾವೇರಿ ನೀರು, 75 ಬೋರ್‌ವೆಲ್‌: ನಗರಸಭೆ ವತಿಯಿಂದ ಈ ಹಿಂದೆ ವಿತರಿಸುತ್ತಿದ್ದ ಲಕ್ಷ್ಮಣತೀರ್ಥ ನದಿ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿಯಿಂದ ಎಚ್ಚೆತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರವಾಸಿಗಳಿಗೆ ಶುದ್ಧ ಕುಡಿಯುವ ಒದಗಿಸಲು ಕೆ.ಆರ್‌.ನಗರದಿಂದ ಕಾವೇರಿ ನೀರು ಇದರೊಟ್ಟಿಗೆ 75ಕ್ಕೂ ಹೆಚ್ಚು ಬೋರ್‌ವೆಲ್‌ಗ‌ಳ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.

ನಲ್ಲಿ ನೀರು ದುರ್ವಾಸನೆ: ಸರಬರಾಜಾಗುತ್ತಿರುವ ನಲ್ಲಿ ನೀರು ದುರ್ವಾಸನೆ ಬೀರುತ್ತಿರುವ ಬಗ್ಗೆ ನಗರಸಭೆ ನೀರು ಸರಬರಾಜು ಎಂಜಿನಿಯರ್‌ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅಲ್ಲಲ್ಲಿ ತಪಾಸಣೆ ನಡೆಸಿ, ಮುಖ್ಯ ಪೈಪ್‌ಗ್ಳನ್ನು ಸ್ವತ್ಛಗೊಳಿಸಿ ನೀರು ಹರಿಸಲಾಗಿತ್ತು. ಆದರೆ, ಇದೀಗ ದುರ್ವಾಸನೆಯೊಂದಿಗೆ ಹುಳು ಮಿಶ್ರಿತ ನೀರು ಹರಿದು ಬರುತ್ತಿದೆ....

ಫೋಟೋ - http://v.duta.us/lrpFjwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/higgFAAA

📲 Get Mysore News on Whatsapp 💬