ನಾಳೆಯಿಂದ ಹಾಸನಾಂಬೆಯ ದರ್ಶನ ಆರಂಭ

  |   Hassannews

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನ ಅ.17ರಿಂದ ಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರು ದೇವಿಯ ದರ್ಶನಕ್ಕೆ ಹಾಸನ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡುತ್ತಿದೆ. ಆದರೆ ಜಾತ್ರಾ ಮಹೋತ್ಸವದ ಸಿದ್ಧತೆಗೆ ಮಳೆ ಅಡಚಣೆಯಾಗಿದ್ದು, ಅರೆ, ಬರೆ ಸಿದ್ಧತೆಯ ನಡುವೆಯೇ ಗುರುವಾರದಿಂದ ಹಾಸನಾಂಬಾ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.

ಕಳೆದ ಒಂದು ತಿಂಗಳನಿಂದಲೂ ಹಾಸನ ಜಿಲ್ಲಾಡಳಿತವು ಹಾಸನಾಂಬಾ ಜಾತ್ರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ವಿವಿಧ ಇಲಾಖೆಗಳಿಗೆ ಮೂಲ ಸೌಕರ್ಯದ ಹೊಣೆಯನ್ನು ವಹಿಸಿದೆ. ದೇವಾಲಯದ ಆವರಣದಲ್ಲಿ ಸ್ವಚ್ಛತೆ, ದೇವಾಲಯದ ಸುತ್ತಮುತ್ತ ಸ್ವಚ್ಛತೆ, ದೇವಾಲಯಕ್ಕೆ ಬಣ್ಣ ಬಳಿಯುವುದು, ಭಕ್ತರು ಸುಗಮವಾಗಿ ದೇವಿಯ ದರ್ಶನ ಪಡೆಯಲು ಸರದಿಯ ಸಾಲುಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಮತ್ತಿತರ ವ್ಯವಸ್ಥೆ, ವಿದ್ಯುದ್ಧೀಪದ ಅಲಂಕಾರವನ್ನು ಜಿಲ್ಲಾಡಳಿತವು ಮಾಡಿದೆ. ಆದರೆ ರಸ್ತೆಗಳ ಗುಂಡಿ ಮುಚ್ಚುವ ‌ಸ್ವಚ್ಛತೆಯ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.

ರಸ್ತೆ ಅಭಿವೃದ್ಧಿಗೆ ಮಳೆ ಅಡ್ಡಿ: ದೇವಾಲಯದ ಹಿಂಭಾಗದ ಹೊಸಲೈನ್‌ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಪ್ರತಿದಿನವೂ ಮಳೆ ಬರುತ್ತಿರುವುದರಿಂದ ಡಾಂಬರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಂತೆಪೇಟೆ ಪಾಯಣ್ಣ ಸರ್ಕಲ್‌ನಿಂದ ಹಳೆ ಮಟನ್‌ ಮಾರ್ಕೆಟ್‌ ರಸ್ತೆ ವರೆಗೆ ಮಾತ್ರ ಡಾಂಬರೀಕರಣ ನಡೆದಿದೆ. ಅಲ್ಲಿಂದ ಸಾಲಗಾಮೆ ರಸ್ತೆ ವರೆಗೂ ರಸ್ತೆ ದುರಸ್ತಿ ಆರಂಭವಾಗಿಯೇ ಇಲ್ಲ. ಜಾತ್ರಾ ಮಹೋತ್ಸವದ ವೇಳೆಗೆ ಸರಸ್ವತಿಪುರಂ ಸರ್ಕಲ್‌ನಿಂದ ವರ್ತುಲ ರಸ್ತೆವರೆಗೆ ಸಾಲಗಾಮೆ ರಸ್ತೆಯ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಆ ರಸ್ತೆ ಕಾಮಗಾರಿ ಜಾತ್ರೆ ಮುಗಿದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ....

ಫೋಟೋ - http://v.duta.us/EZ1KeQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Q3T2agAA

📲 Get Hassan News on Whatsapp 💬