ಪೊಲೀಸರ ಕೈಸೇರಿತು ಬಾಡಿ ಕ್ಯಾಮರಾ!

  |   Mandyanews

ಮಂಡ್ಯ: ಬಹು ನಿರೀಕ್ಷಿತ ಬಾಡಿ ಕ್ಯಾಮರಾ ಪೊಲೀಸ್‌ ಇಲಾಖೆ ಕೈ ಸೇರಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದು ಪೊಲೀಸರ ಮೈಗೆ ತಗುಲಿ ಹಾಕಿಕೊಳ್ಳಲಿದೆ. ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿ ಸೆರೆಹಿಡಿಯಲು ಈ ಕ್ಯಾಮರಾಗಳು ಪೊಲೀಸರ ನೆರವಿಗೆ ಬರಲಿವೆ.

ಮೊದಲ ಹಂತದಲ್ಲಿ 40 ಬಾಡಿ ಕ್ಯಾಮರಾಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ತರಿಸಿಕೊಂಡಿದೆ. ಸಂಚಾರಿ ಠಾಣೆ ಪಿಎಸ್‌ಐ, ಎಎಸ್‌ಐಗಳು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐಗಳು ಕ್ಯಾಮರಾ ಧರಿಸಿ ಕರ್ತವ್ಯಕ್ಕೆ ಇಳಿಯಲಿದ್ದಾರೆ. ಒಟ್ಟು 60 ಕ್ಯಾಮರಾಗಳ ಅಗತ್ಯವಿದ್ದು, ಅನುದಾನ ಆಧರಿಸಿ, ಉಳಿದ ಕ್ಯಾಮರಾಗಳನ್ನು ಖರೀದಿ ಮಾಡಲು ಇಲಾಖೆ ನಿರ್ಧರಿಸಿದೆ ಎಂದು ಎಸ್‌ಪಿ ಕೆ.ಪರಶುರಾಮ ತಿಳಿಸಿದರು.

ಬಾಡಿ ಕ್ಯಾಮರಾ ಬಳಕೆ ಹೇಗೆ? : ದೇಹದ ಎದೆಯ ಭಾಗದಲ್ಲಿ ಶರ್ಟ್‌ಗೆ ಅಳವಡಿಸಿದ ಈ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಲಿವೆ. ಅಗತ್ಯ ಸಂದರ್ಭಗಳಲ್ಲಿ ಬಟನ್‌ ಒತ್ತಿ ಕ್ಯಾಮರಾ ಆನ್‌ ಮಾಡಿಕೊಳ್ಳಬಹುದು. ಪೊಲೀಸ್‌ ಅಧಿಕಾರಿ ಇತರೆ ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ದೃಶ್ಯಗಳೂ, ಇದರಲ್ಲಿ ಸೆರೆಯಾಗುತ್ತವೆ. ಪೊಲೀಸ್‌ ಅಧಿಕಾರಿ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯವೂ ಇದರಲ್ಲಿ ದಾಖಲಾಗುವುದು. ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ಸಾಕ್ಷಿ ಸಮೇತ ದಂಡ ವಸೂಲಿಗೂ ಅನುಕೂಲವಾಗಿದೆ ಎಂದು ಅವರು ಹೇಳಿದರು....

ಫೋಟೋ - http://v.duta.us/ry_dXgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/H3qIGwAA

📲 Get Mandya News on Whatsapp 💬