ಬೆಳ್ತಂಗಡಿಯಲ್ಲಿ ಇಲಿ ಜ್ವರ ಭೀತಿ

  |   Dakshina-Kannadanews

ಬೆಳ್ತಂಗಡಿ: ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಶಂಕಿತ ಇಲಿ ಜ್ವರದ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಕೊಯ್ಯೂರು ಗ್ರಾಮದ ಮಾಜಿ ಸೈನಿಕ ಎರ್ಮಾಜೆ ಸುರೇಶ್‌ ಭಟ್‌ (52) ಎಂಬವರಿಗೆ ಶಂಕಿತ ಇಲಿ ಜ್ವರ ಬಾಧಿಸಿದೆ. ಅ.9ರಂದು ಜ್ವರ

ಕಾಣಿಸಿಕೊಂಡು ವಿಪರೀತ ಗಂಟು ನೋವು ಉಂಟಾಗಿದ್ದರಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಗೆ ಅ.14ರಂದು ದಾಖಲಾಗಿದ್ದರು. ವೈದ್ಯರು ರಕ್ತದ ಮಾದರಿ ಪಡೆದು ಅ.15ರಂದು ಇಲಿ ಜ್ವರ ಎಂಬುದನ್ನು ಖಚಿತಪಡಿಸಿದ್ದಾರೆ.

ಗಂಟು ನೋವು ಸೇರಿದಂತೆ ವಿಪರೀತ ಆಯಾಸ, ವಾಂತಿ ಲಕ್ಷಣ ಗೋಚರಿಸಿದ್ದು, ಬಿಳಿ ರಕ್ತಕಣ 42 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.

ಇಲಿ ಜ್ವರದಿಂದ ಕಿಡ್ನಿ ಮತ್ತು ಲಿವರ್‌ ಸಮಸ್ಯೆ ಎದುರಾಗುವುದರಿಂದ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮೊದಲ ಬಾರಿಗೆ ಇಲಿಜ್ವರ ಪ್ರಕರಣ ಬೆಳಕಿಗೆ ಬಂದಿರು ವುದಾಗಿಯೂ ವೈದ್ಯರು ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರಕರಣ ಬೆಳಕಿಗೆ ಬಂದಿದ್ದರೂ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಗೆ ಮಾಹಿತಿ ಲಭಿಸಿಲ್ಲ.

ನೀರಿನಿಂದ ಪ್ರಸಾರ

ವೈದ್ಯಕೀಯವಾಗಿ ಲೆಪ್ಟೊಸ್ಪೈ ರೋಸಿಸ್‌ ಎಂದು ಕರೆಸಿಕೊಳ್ಳುವ ಇಲಿ ಜ್ವರದ ರೋಗಾಣು ಮಣ್ಣಲ್ಲಿ ಸುಮಾರು ಆರು ಗಂಟೆವರೆಗೆ ಮಾತ್ರ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು ಎಂಬುದು ದೃಢಪಟ್ಟಿದೆ. ನೀರಿನ ಮೂಲಕ ಹರಡುವುದರಿಂದ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ....

ಫೋಟೋ - http://v.duta.us/tgy8MwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zGYr-gAA

📲 Get Dakshina Kannada News on Whatsapp 💬