ಮಾತೃಪೂರ್ಣ ಯೋಜನೆ ಶೇ.60 ಯಶಸ್ವಿ

  |   Chikkamagalurunews

ಚಿಕ್ಕಮಗಳೂರು: ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಶೇ.60ರಷ್ಟು ಮಾತ್ರ ಯಶಸ್ವಿಯಾಗಿದೆ.

ಮಾತೃಪೂರ್ಣ ಯೋಜನೆ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ಸರ್ಕಾರ ಆಲೋಚಿಸಿತ್ತು. ಅಲ್ಲದೇ, ನಂತರ ಆರು ತಿಂಗಳು ಬಾಣಂತಿಯರಿಗೂ ಉತ್ತಮ ಆಹಾರ ನೀಡುವ ಆಲೋಚನೆಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರದಲ್ಲಿ ಅನ್ನ, ಸಾಂಬಾರು, ಪಲ್ಯ, ಮೊಟ್ಟೆ, ಶೇಂಗಾ ಚಟ್ನಿ ಹಾಗೂ ಹಾಲನ್ನು ನೀಡಲು ಮುಂದಾಗಿತ್ತು.

ಈ ಯೋಜನೆ ಆರಂಭವಾದಾಗ ಗರ್ಭಿಣಿಯರು ಹಾಗೂ ಬಾಣಂತಿಯರು ಇರುವ ಮನೆಗಳಿಗೆ ಹೋಗಿ ಆಹಾರ ನೀಡಲು ಅಂಗನವಾಡಿ ಕೇಂದ್ರಗಳಿಗೆ ಸೂಚಿಸಲಾಗಿತ್ತು. ಆನಂತರ ಇದು ಕಷ್ಟಸಾಧ್ಯ ಹಾಗೂ ಮನೆಗೆ ಹೋಗಿ ನೀಡಿದಾಗ ಅದು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಮಾತ್ರ ಸಿಗದೇ ಮನೆಯ ಇನ್ನಿತರ ಮಂದಿ ಸಹ ಅದರಲ್ಲಿ ಪಾಲು ಪಡೆಯುತ್ತಿದ್ದರು.

ಹಾಗಾಗಿ, ಅಂಗನವಾಡಿ ಕೇಂದ್ರಗಳಿಗೆ ಹೋಗಿ ಆಹಾರ ಸೇವಿಸಲು ಅವರಿಗೆ ಸೂಚಿಸಲಾಯಿತು. ಆದರೆ, ಈ ವ್ಯವಸ್ಥೆ ಸಹ ಈಗ ಯಶಸ್ವಿಯಾಗಿಲ್ಲ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಅಂಕಿ-ಅಂಶ ಸ್ಪಷ್ಟಪಡಿಸುತ್ತದೆ. ಮಾತೃಪೂರ್ಣ ಯೋಜನೆಯಡಿ ಒಟ್ಟು ಇಲಾಖೆ ನೋಂದಣಿ ಮಾಡಿಕೊಂಡಿರುವ ಗರ್ಭಿಣಿ ಮತ್ತು ಬಾಣಂತಿಯರ ಸಂಖ್ಯೆ 12912....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/TnST4AAA

📲 Get Chikkamagaluru News on Whatsapp 💬