ಮಾದಕ ವ್ಯಸನ ಅಂತಾರಾಷ್ಟ್ರೀಯ ಪಿಡುಗು

  |   Bidarnews

ಬೀದರ: ಮಾದಕ ವ್ಯಸನವೆಂಬುದು ಇಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಿಡುಗಾಗಿ ಕಾಡುತ್ತಿದೆ. ಇದರಿಂದ ಯುವಜನರನ್ನು ಮುಕ್ತಗೊಳಿಸುವುದೇ ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ನೆಹರೂ ಯುವ ಕೇಂದ್ರದ ಉಪನಿರ್ದೇಶಕ ಡಿ. ದಯಾನಂದ ಹೇಳಿದರು.

ನಗರದ ಬ್ರಿಮ್ಸ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಮುಕ್ತ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳಿಗೆ ಇಂದು ಯುವಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಪಿಡುಗು ಉಲ್ಬಣಗೊಂಡಿದೆ. ಆದ್ದರಿಂದ ವಿಶೇಷವಾಗಿ ಈ ಭಾಗದ ಮುಗ್ಧ ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಹಳ್ಳಿಗಳಲ್ಲಿ ಕೆಲವರು ಮಾದಕ ವ್ಯಸನವನ್ನೇ ದಿನನಿತ್ಯದ ಕಾರ್ಯ ಎಂದು ತಿಳಿದು ಪ್ರತಿದಿನ ಬೀಡಿ, ಸಿಗರೇಟ್‌, ಮದ್ಯ ಕುಡಿದು ತಮ್ಮ ಆರೋಗ್ಯ ಮತ್ತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮುದಾಯ ಕೇಂದ್ರದ ನೌಕರರು ಹಳ್ಳಿಯಲ್ಲಿರುವ ಇಂತಹ ಜನತೆಯನ್ನು ವ್ಯಸನಮುಕ್ತ ಮಾಡುವ ಗುರಿ ಹೊಂದಬೇಕು. ಅದರಲ್ಲೂ ಯುವಕರನ್ನು ಸರಿದಾರಿಗೆ ತರಲು ನಿರಂತರ ಪ್ರಯತ್ನಿಸಬೇಕು ಎಂದು ತಿಳಿಸಿದರು. ಶಿವಯ್ಯ ಸ್ವಾಮಿ ಮಾತನಾಡಿ, ಮಾದಕ ವ್ಯಸನಗಳಿಗೆ ಬಲಿಯಾದ ವ್ಯಕ್ತಿ ಅದನ್ನು ಪಡೆಯುವವರೆಗೂ ಆತನಿಗೆ ಸಮಾಧಾನ ಇರುವುದಿಲ್ಲ. ಕಳ್ಳತನ ಮಾಡಿಯಾದರೂ, ಮನೆಯಲ್ಲಿಯ ವಸ್ತುಗಳನ್ನು ಮಾರಾಟ ಮಾಡಿಯಾದರೂ ಡ್ರಗ್ಸ್‌ ತೆಗೆದುಕೊಳ್ಳುತ್ತಾನೆ. ಇದರಿಂದ ತಾನು ಹಾಳಾಗುವುದಲ್ಲದೆ ಇಡೀ ಕುಟುಂಬದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಾನೆ.ವಿದೇಶದಿಂದ ಭಾರತಕ್ಕೆ ಡ್ರಗ್ಸ್‌ ಕಳುಹಿಸುತ್ತಿದ್ದಾರೆ. ಭಾರತದ ಯುವಕರನ್ನು ಶಕ್ತಿಹೀನರನ್ನಾಗಿ ಮಾಡುವ ದೊಡ್ಡ ಹುನ್ನಾರ ನಡೆದಿದೆ. ಆದ್ದರಿಂದ ಗಡಿಯಲ್ಲಿ ವೀರಯೋಧರು ದೇಶವನ್ನು ಕಾಯುತ್ತಿದ್ದರೆ, ದೇಶದ ಒಳಗೆ ಆಂತರಿಕ ಶತ್ರುವಾದ ಈ ಡ್ರಗ್ಸ್‌ ಧಂದೇಕೋರರ ವಿರುದ್ಧ ನಿರಂತರ ಹೋರಾಡಬೇಕಾಗಿದೆ. ಇದರಿಂದ ಯುವಕರನ್ನು ಕಾಪಾಡಬೇಕಾಗಿದೆ ಎಂದರು....

ಫೋಟೋ - http://v.duta.us/1Rjs6gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/T8CU5AAA

📲 Get Bidar News on Whatsapp 💬