ಮೂಲ ಸೌಲಭ್ಯ ಕಲ್ಪಿಸಲು ಕ್ರಮ

  |   Ramnagaranews

ಮಾಗಡಿ: ರಾಜೀವ್‌ ಗಾಂಧಿ ಕಾಲೋನಿಗೆ ರಸ್ತೆ, ಚರಂಡಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು. ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜೀವ್‌ ಗಾಂಧಿ ಕಾಲೋನಿ ನಿವಾಸಿಗಳು ರಸ್ತೆ, ಚರಂಡಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದರು. ಪಟ್ಟಣದ ಸ್ವತ್ಛತೆ ಮಾಡುತ್ತಿರುವ ಇಲ್ಲಿನ ರಾಜೀವ್‌ ಗಾಂಧಿ ಕಾಲೋನಿ ಜನರಿಗೆ ಮೂಲ ಸೌಕರ್ಯ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾಮಗಾರಿಯಲ್ಲಿ ಗುಣಮಟ್ಟವಿರಲಿ: ಎಚ್‌ಡಿಕೆ ಸಿಎಂ ಆಗಿದ್ದಾಗ ಕೊಳಚೆ ನಿರ್ಮೂಲನೆ ವತಿಯಿಂದ 57 ಕೋಟಿ ರೂ. ಅನುದಾನ ಮಂಜೂರಾತಿ ಮಾಡಿಸಲಾಗಿತ್ತು. ಈಗ ಕಾಂಕ್ರೀಟ್‌ ರಸ್ತೆ, ಚರಂಡಿ ಮಾಡಿಸಿ, ಅದರ ಮೇಲೆ ಸ್ಲಾಬ್‌ ಹಾಕಲಾಗವುದು. ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೆ ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುವುದು. ಇಲ್ಲಿನ ಶೌಚಾಲಯವನ್ನು ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪುರಸಭೆ ಅಧಿಕಾರಿಗೆ ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಮ್‌, ಮಾಜಿ ಸದಸ್ಯರಾದ ಎಂ.ಎನ್‌.ಮಂಜುನಾಥ್‌, ಮಂಜುನಾಥ್‌, ರೂಪೇಶ್‌ ಕುಮಾರ್‌, ಎಂ. ಮುನಿಕೃಷ್ಣ, ನರಸಿಂಹಯ್ಯ, ಕುಮಾರ್‌, ಮಹೇಶ್‌, ಜಗದೀಶ್‌, ಚಂದ್ರಪ್ಪ, ರವಿ, ಪುರಸಭೆ ಆರೋಗ್ಯ ನಿರೀಕ್ಷಕಿ ಕುಸುಮಾ ಇತರರಿದ್ದರು.

ಫೋಟೋ - http://v.duta.us/cm-sfwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hoEl3AAA

📲 Get Ramnagara News on Whatsapp 💬