ಮೈಸೂರು ಜಿಲ್ಲೆ ವಿಭಜನೆ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ

  |   Mysorenews

ಮೈಸೂರು: ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವಂತೆ ಪ್ರಸ್ತಾವನೆ ಮಾಡಿರುವ ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಅವರ ನಡೆ ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಆರು ತಾಲೂಕುಗಳು ಇವೆ. ಹೀಗಿರುವಾಗ 30 ರಿಂದ 35 ಕಿ.ಮೀ.ಗೊಂದು ಜಿಲ್ಲೆ ಮಾಡಲಾಗುತ್ತದೆಯೇ? ಹೀಗೆ ಮೂರು ತಾಲೂಕುಗಳಿಗೆ ಒಂದು ಜಿಲ್ಲೆ ಮಾಡುತ್ತಾ ಹೋದರೆ ರಾಜ್ಯದಲ್ಲಿ ಇನ್ನೂ 20 ರಿಂದ 25 ಹೊಸ ಜಿಲ್ಲೆಗಳನ್ನು ಮಾಡಿ ಎಲ್ಲಾ ಅತೃಪ್ತ ಶಾಸಕರ‌ನ್ನು ಉಸ್ತುವಾರಿಗಳನ್ನಾಗಿ ಮಾಡಿಬಿಡಬಹುದು ಎಂದು ಲೇವಡಿ ಮಾಡಿದರು.

ರಾಜಕೀಯ ಗಿಮಿಕ್‌ಗಾಗಿ ಮೊದಲಿನಿಂದಲೂ ವಿಶ್ವನಾಥ್‌ ಅವರು ಪ್ರಚಾರಕ್ಕಾಗಿ ತಮ್ಮ ಮನಸ್ಸಿಗೆ ಬಂದಂತೆ ಬಹಳಷ್ಟು ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ ಈಗಾಗಲೇ ಜನತೆಯಿಂದ ಮುಜುಗರಕ್ಕೀಡಾಗಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಅಧಿಕಾರಕ್ಕಾಗಿ ಈ ರೀತಿಯ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ತನ್ನದೇ ಆದ ಹಿರಿಮೆ ಇದೆ. ಇಡೀ ವಿಶ್ವವೇ ಮೈಸೂರನ್ನು ತಿರುಗಿ ನೋಡುತ್ತದೆ. ದೊಡ್ಡ ರಾಜ್ಯವಾಗಿದ್ದ ಮೈಸೂರು ಸಂಸ್ಥಾನ, ನಮ್ಮ ಮಹಾರಾಜರ ಉದಾತ್ತ ಮನೋಭಾವದಿಂದ ಕರ್ನಾಟಕ ಏಕೀಕರಣವಾದ ಮೇಲೆ ಮೈಸೂರು ಜಿಲ್ಲೆಯಾಗಿದೆ. ಇಂತಹ ಇತಿಹಾಸವುಳ್ಳ ಮೈಸೂರು ಜಿಲ್ಲೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಇಬ್ಭಾಗ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ....

ಫೋಟೋ - http://v.duta.us/p9BLMgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/WZvULAAA

📲 Get Mysore News on Whatsapp 💬