"ರಸ್ತೆ ಬದಿ ವಾಹನ ನಿಲುಗಡೆ ಮಾಡಿದ್ರೆ ದಂಡ'

  |   Koppalnews

ಕಾರಟಗಿ: ಪಟ್ಟಣದಲ್ಲಿ ಪಾದಚಾರಿ ರಸ್ತೆಯ ಮೇಲೆ ದ್ವಿಚಕ್ರವಾಹನ ಸೇರಿದಂತೆ ಇತರೆ ಯಾವುದೇ ವಾಹನಗಳನ್ನು ಪಾರ್ಕಿಂಗ್‌ (ನಿಲುಗಡೆ) ಮಾಡಬಾರದು ಎಂದು ಪಿಎಸ್‌ಐ ವಿಜಯಕೃಷ್ಣಗೌಡ ವಾಹನ ಸವಾರರಿಗೆ ತಾಕೀತು ಮಾಡಿದರು.

ಪಟ್ಟಣದ ಕನಕದಾಸ ವೃತ್ತ ಹಾಗೂ ಹಳೆ ಬಸ್‌ ನಿಲ್ದಾಣದ ಬಳಿಯ ರಸ್ತೆಗಳ ಇಕ್ಕೆಲಗಳಲ್ಲಿ ನಿತ್ಯ ದ್ವಿಚಕ್ರವಾಹನ ಸೇರಿದಂತೆ ಲಘುವಾಹನಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರಿಂದ ಅಲ್ಲದೆ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದ್ದರಿಂದ ಮಂಗಳವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ದ್ವಿಚಕ್ರವಾಹನ ಸವಾರರಿಗೆ ಮತ್ತು ಲಘುವಾಹನಗಳ ಚಾಲಕರಿಗೆ ಪಿಎಸ್‌ಐ ವಿಜಯಕೃಷ್ಣ ಗೌಡ ತಿಳಿ ಹೇಳಿದರು. ನಂತರ ಮಾತನಾಡಿದ ಅವರು, ಪಟ್ಟಣದ ಆರ್‌ಜಿ ರಸ್ತೆಯ ಪೊಲೀಸ್‌ ಠಾಣೆಯಿಂದ ಕನಕದಾಸ ವೃತ್ತ ಹಳೆ ಬಸ್‌ ನಿಲ್ದಾಣ, ಎಪಿಎಂಸಿ ಯಾರ್ಡ್‌ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ದ್ವಿಚಕ್ರವಾಹನ ಸೇರಿದಂತೆ ಲಘುವಾಹನಗಳ ನಿಲ್ಲಿಸುವಂತಿಲ್ಲ. ಇಂದಿನಿಂದಲೆ ಈ ನಿಯಮ ಜಾರಿಗೆ ತರಲಾಗುತ್ತಿದೆ. ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೂ ಖಾಸಗಿ ವಾಹನಗಳು ಸೇರಿದಂತೆ ದ್ವಿಚಕ್ರವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಗತ್ಯವಿದ್ದೆಡೆ ದ್ವಿಚಕ್ರವಾಹನ ನಿಲುಗಡೆಗೆ ಸ್ಥಳ ಸೂಚಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಚಾರ ನಿಯಂತ್ರಣಕ್ಕೆ ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಫೋಟೋ - http://v.duta.us/VlMTEQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/y-yewQAA

📲 Get Koppal News on Whatsapp 💬