ವಿಕಲಚೇತನರಿಗಿನ್ನು ತಾಲೂಕಲ್ಲೇ ಐಡಿ

  |   Uttara-Kannadanews

ಶಿರಸಿ: ವಿಕಲಚೇತನರ ಗುರುತಿನ ಚೀಟಿ ನೀಡಿಕೆ ಸಂಬಂಧ ಇನ್ನು ಮುಂದೆ ತಾಲೂಕು ವೈದ್ಯಾಧಿಕಾರಿಗಳೇ ದೃಢೀಕರಿಸಿ ಯುನಿಕ್‌ ಐಡಿ ನೀಡುವಂತೆ ಹತ್ತು ದಿನಗಳಲ್ಲಿ ಸರಕಾರದ ಆದೇಶ ಬರಲಿದೆ ಎಂದು ರಾಜ್ಯ ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ತಿಳಿಸಿದರು.

ಅವರು ನಗರದ ತಾಪಂನಲ್ಲಿ ವಿಕಲಚೇತನರ ಜೊತೆ ಸಮಾಲೋಚನೆ ನಡಸಿ, ಈವರೆಗೆ ಗುರುತಿನ ಚೀಟಿ ನೀಡುವ ಅನುಮತಿ ಜಿಲ್ಲಾ ಕೇಂದ್ರ ವೈದ್ಯಾಧಿಕಾರಿಗಳಿಂದ ಆಗಬೇಕಿತ್ತು. ಆದರೆ, ಇದರಿಂದ ಅನೇಕ ಗುಡ್ಡಗಾಡು ಜಿಲ್ಲೆಗಳಿಂದ ಸಮಸ್ಯೆ ಆಗುತ್ತಿದ್ದವು. ಇದನ್ನು ತಪ್ಪಿಸಲು ತಾಲೂಕು ಹಂತದ ವೈದ್ಯರಿಗೇ ಈ ಅವಕಾಶ ನೀಡುವ ಬಗ್ಗೆ ಸರಕಾರ ಚಿಂತಿಸಿದೆ ಎಂದರು.

ರಾಜ್ಯದಲ್ಲಿ ಯುನಿಕ್‌ ಐಡಿ 9,72,305 ಬುದ್ದಿಮಾಂದ್ಯ ಹಾಗೂ ಅಂಗವಿಕಲರಿಗೆ ಕೊಡಬೇಕಿತ್ತು. ಆದರೆ, ಈವರೆಗೆ ಆಗಿದ್ದು ಕೇವಲ 53 ಸಾವಿರ ಜನರಿಗೆ. ಈ ಪ್ರಕ್ರಿಯೆ ವೇಗಗೊಳಿಸಲು ಸರಕಾರ ತಾಲೂಕು ಹಂತದಲ್ಲಿ ದಿನಕ್ಕೆ ಕನಿಷ್ಠ 20 ಜನರಿಗಾದರೂ ಮಾನ್ಯತೆ ಮಾಡಬೇಕು ಎಂದು ಸೂಚಿಸಿದೆ ಎಂದ ಲೀಲಾವತಿ, ಅಂತಾರಾಜ್ಯದ ಗಡಿಗಳಲ್ಲಿ ಎರಡೂ ರಾಜ್ಯದ ಗುರುತಿನ ಚೀಟಿ ಪಡೆದ ಉದಾಹರಣೆಗಳೂ ಇವೆ. ಈ ಕಾರಣದಿಂದ ಎಲ್ಲೇ ಇದ್ದರೂ ಒಂದೇ ಯುನಿಕ್‌ ಐಡಿ ಇರಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದರು....

ಫೋಟೋ - http://v.duta.us/w_VrgAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/0N5pQAAA

📲 Get Uttara Kannada News on Whatsapp 💬