ವಾಣಿಜ್ಯ ವ್ಯವಹಾರಗಳ "ಬಂದರ್‌'ನಲ್ಲಿ ಒಳಚರಂಡಿಯದ್ದೇ ಸಮಸ್ಯೆ!

  |   Dakshina-Kannadanews

ಮಹಾನಗರ: ಒಂದೆಡೆ ವಾಣಿಜ್ಯ ವ್ಯವಹಾರಗಳ ಪ್ರದೇಶ; ಇನ್ನೊಂದೆಡೆ ಜನವಸತಿ ಇರುವ ಜಾಗ; ಇದರ ಮಧ್ಯೆ ಇಕ್ಕಟ್ಟಿನ ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆಯ ಸ್ಥಳ ಬಂದರು!

ಕರಾವಳಿ ಸಹಿತ ಬೇರೆ ಬೇರೆ ಭಾಗದಿಂದ ವಾಣಿಜ್ಯ ವ್ಯವಹಾರಗಳಿಗಾಗಿ ಮಂಗಳೂರನ್ನು ಬೆಸೆದುಕೊಂಡಿರುವ ಬಂದರು ಪ್ರದೇಶ ಸುದೀರ್ಘ‌ ವರ್ಷಗಳಿಂದಲೇ ಇಕ್ಕಟ್ಟಿನ ಜಾಗದಲ್ಲಿದೆ. ವ್ಯಾಪಾರ ವಹಿವಾಟಿನ ಮುಖೇನ ಧಾರ್ಮಿಕ ಸಹಬಾಳ್ವೆಯನ್ನು ಸಾರಿದ ಸ್ಥಳವಿದು. ಬೇರೆ ಬೇರೆ ರಾಜ್ಯದವರು ಉದ್ಯೋಗ ನಿಮಿತ್ತ ನೆಲೆಸಿರುವ ಪ್ರದೇಶವಿದು.

ಇತಿಹಾಸ ಪ್ರಸಿದ್ಧ ಜಿ.ಎಂ. ರಸ್ತೆಯಲ್ಲಿರುವ ಜುಮ್ಮಾ ಮಸೀದಿ ಹಾಗೂ ಇನ್ನೆರಡು ಮಸೀದಿಗಳು ಈ ವಾರ್ಡ್‌ ನಲ್ಲಿದೆ. ಶ್ರೀ ಕಾಳಿಕಾಂಬ ದೇವಸ್ಥಾನ, ಶ್ರೀ ಮುಖ್ಯಪ್ರಾಣ, ಶ್ರೀ ಗೋಪಾಲಕೃಷ್ಣ, ಗಾಯತ್ರಿ ದೇವ ಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳು, ಜೈನ ಮಂದಿರ, ಬಂದರು ಪೊಲೀಸ್‌ ಠಾಣೆ ಈ ವಾರ್ಡ್‌ ನಲ್ಲಿದೆ.

ಪಾಲಿಕೆಯಲ್ಲಿ ರಮೀಜ ಬಾನು ಸಹಿತ ಇಬ್ಬರು ಮಾತ್ರ ಜೆಡಿಎಸ್‌ ಸದಸ್ಯರಿರುವ ಕಾರಣದಿಂದ ಈ ವಾರ್ಡ್‌ಗೆ ಅನು ದಾನ ಬಂದಿದ್ದು ಕಡಿಮೆ; ಬಂದ ಅನುದಾನವನ್ನು ಅವರು ಸೂಕ್ತವಾಗಿ ವಿನಿಯೋಗಿಸಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾದರೆ, ಬಂದರಿನ ಒಳರಸ್ತೆಗಳು, ಪೊಲೀಸ್‌ ಠಾಣೆಯ ಸುತ್ತಮುತ್ತಲಿನ ಒಳರಸ್ತೆಗಳು ಡಾಮರು ಕಾಣದೆ ಅದೆಷ್ಟೋ ವರ್ಷಗಳಾಗಿವೆ ಎಂಬುದು ಕೆಲವರು ವಾದ....

ಫೋಟೋ - http://v.duta.us/zfKgIwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PCuYUwAA

📲 Get Dakshina Kannada News on Whatsapp 💬