ಸಿಡಿಲಬ್ಬರದ ಮಳೆಗೆ ನಾಲ್ವರ ಸಾವು

  |   Karnatakanews

ಬೆಂಗಳೂರು: ಮಲೆನಾಡು ಸೇರಿ ರಾಜ್ಯದ ಹಲವೆಡೆ ಸಿಡಿಲು, ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಯಲಬುಗೇರಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ತಂದೆಯ ಎದುರಲ್ಲೇ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಸುಜಾತಾ ಕುದರಿಮೋತಿ (22), ಅಮರೇಶ ಕುದರಿಮೋತಿ (18) ಹಾಗೂ ಗವಿಸಿದ್ದಪ್ಪ ಕುದರಿಮೋತಿ (15) ಮೃತರು.

ಘಟನೆ ಯಲ್ಲಿ ಮೃತ ಮಕ್ಕಳ ತಂದೆ ಸೋಮಣ್ಣ ಕುದರಿಮೋತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೂವರು ಮಕ್ಕಳು ಪಡಸಾಲೆಯಲ್ಲಿ ಮಲಗಿದ್ದರೆ, ತಂದೆ ಅಡುಗೆ ಕೋಣೆಯಲ್ಲಿ ಮಲಗಿದ್ದರು. ಮೃತ ಮಕ್ಕಳ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ತಲಾ 4 ಲಕ್ಷ, ಸಿಎಂ ಪರಿಹಾರ ನಿಧಿಯಿಂದ ತಲಾ 1 ಲಕ್ಷ ಸೇರಿ ಒಟ್ಟು ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಕೊಪ್ಪಳ ತಹಶೀಲ್ದಾರ್‌ ಜೆ.ಬಿ.ಮಜಿ ತಿಳಿಸಿದ್ದಾರೆ.

ಸಿಡಿಲಿಗೆ ವ್ಯಕ್ತಿ ಬಲಿ: ರಾಣಿಬೆನ್ನೂರು ತಾಲೂಕಿನ ಕುರಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಶಿವಾನಂದಪ್ಪ ಬಸಪ್ಪ ಬಾಲಣ್ಣನವರ (45) ಅಸುನೀಗಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ನರ ಸಿಂಹರಾಜಪುರ ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗು ತ್ತಿದೆ. ಸಕಲೇಶಪುರ ತಾಲೂಕಿನಲ್ಲಿ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಜನಜೀವನ ಅಸ್ತವಸ್ತಗೊಂಡಿತ್ತು....

ಫೋಟೋ - http://v.duta.us/_XtK7QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/kbyh9AAA

📲 Get Karnatakanews on Whatsapp 💬