ಸರ್ಕಾರಿ ಕೆಲಸಕ್ಕೆ ವಿಳಂಬ, ಲಂಚ ಕೇಳಿದರೆ ದೂರು ಕೊಡಿ

  |   Chikkaballapuranews

ಶಿಡ್ಲಘಟ್ಟ: ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡಲಿಕ್ಕೆ ವಿನಾಕಾರಣ ವಿಳಂಬ ಮಾಡಿದರೆ, ಹಾಗೂ ಲಂಚ ಕೇಳಿದರೆ ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಕೆ.ಎಸ್‌.ವೆಂಕಟೇಶ್‌ನಾಯ್ಡು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜನೆ ಮಾಡಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ಜನರಿಂದ ಆಯ್ಕೆಯಾಗಿರುವ ಗ್ರಾಪಂನಿಂದ ಹಿಡಿದು ಲೋಕಸಭೆವರೆಗೂ ಜನಪ್ರತಿನಿಧಿಗಳು ಕರ್ತವ್ಯ ಲೋಪವೆಸಗಿದರೆ, ಕೆಲಸ ಮಾಡಿಕೊಡಲು ಹಣ ಕೇಳಿದರೆ ಅವರ ವಿರುದ್ಧವೂ ದೂರು ನೀಡಬಹುದೆಂದರು.

ಮೌಖಿಕವಾಗಿ ದೂರು ಸಲ್ಲಿಸಬೇಡಿ: ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸವಿಲ್ಲದೆ ವಿನಾಕಾರಣ ಯಾರಾದರೂ ಕಾಲಹರಣ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಕೀಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಕೆಲ ಸಾರ್ವಜನಿಕರು ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ. ಆದರೆ, ಏನೇ ಇದ್ದರೂ ನೇರವಾಗಿ ಬರವಣಿಗೆಯಲ್ಲಿ ಕೊಡಿ ಎಂದು ಹೇಳಿದರು.

1 ಅರ್ಜಿಗೆ 25 ಸಾವಿರ ರೂ.ವರೆಗೂ ದಂಡ: "ನೀವು ನೀಡುವ ದೂರುಗಳು ನಿಮಗೆ ಸಂಬಂಧಿಸಿದ್ದಾಗಿರಬೇಕು, ಪೂರ್ಣ ಅಂಚೆ ವಿಳಾಸ, ಮೊಬೈಲ್‌ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ, ಎಫ್ಐಆರ್‌ ಮಾಡುವಂತಹ ದೂರುಗಳನ್ನು ಎಸಿಬಿಗೆ ಕೊಡಿ, ತನಿಖೆಯಾಗಬೇಕಾಗಿರುವ ದೂರುಗಳನ್ನು ಲೋಕಾಯುಕ್ತರಿಗೆ ಕೊಡಿ. ಯಾವುದೇ ದೂರುಗಳನ್ನು ನೀಡುವ ಮುನ್ನಾ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರ ಕೆಲಸವಾಗದಿದ್ದ ನಂತರ ಎಸಿಬಿಗೆ ದೂರು ಕೊಡಿ. ಮಾಹಿತಿ ಹಕ್ಕು ಕಾಯಿದೆಯಡಿ ದೂರು ಸಲ್ಲಿಸುವ ಮುನ್ನ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೆ, ನಿಮ್ಮ ಅರ್ಜಿ ವಿಲೇವಾರಿಯಾಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗೆ ಒಂದು ಅರ್ಜಿಗೆ 25 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ' ಎಂದರು....

ಫೋಟೋ - http://v.duta.us/fqAQsQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YguZUgAA

📲 Get Chikkaballapura News on Whatsapp 💬