ಸಹಾಯ ದೂರುಗಳಿಗೆ ಕಾಲಮಿತಿಯಲ್ಲೇ ಪರಿಹಾರ

  |   Bangalore-Citynews

ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿರುವ "ಸಹಾಯ ಆ್ಯಪ್‌'ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಮುಖ್ಯವಾಗಿ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಾಲಮಿತಿಯ ಒಳಗೆ ಪರಿಹರಿಸುವುದಕ್ಕೆ ಬಿಬಿಎಂಪಿಯ ಸಹಾಯ ಆ್ಯಪ್‌ಗೆ ಸರ್ವಿಸ್‌ ಲೆವೆಲ್‌ ಅಗ್ರಿಮೆಂಟ್‌ ಎನ್ನುವ ಸಾಫ್ಟ್ವೇರ್‌ ಅಳವಡಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು 12 ಗಂಟೆಗಳ ಒಳಗೆ ಮುಗಿಸಬೇಕು ಎನ್ನುವ ನಿಯಮವಿದೆ. ಬಿಬಿಎಂಪಿ ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಹರಿಸುತ್ತಿದೆಯಾದರೂ, ಕಾಲಮಿತಿಯ ಒಳಗೆ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷ ನಡೆದ ಸ್ವಚ್ಛ ಸರ್ವೇಯಲ್ಲಿ ನಿಗದಿತ ವಿಷಯದಲ್ಲಿ ಬಿಬಿಎಂಪಿ ಸೊನ್ನೆ ಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಸಮಸ್ಯೆಗಳನ್ನು ಕಾಲಮಿತಿಯ ಒಳಗಾಗಿ ಪರಿಹರಿಸುವುದಕ್ಕೆ ಆದ್ಯತೆ ನೀಡಲು ಮುಂದಾಗಿದೆ. ಇದರ ಜತೆಗೆ ಯಾವ ಸಮಸ್ಯೆಗಳು ಹೆಚ್ಚು ದಾಖಲಾಗುತ್ತಿವೆ, ಯಾವ ಕಾರಣಕ್ಕೆ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಸಲು ಮುಂದಾಗಿದೆ.

ಗಣನೀಯ ಪ್ರಮಾಣದಲ್ಲಿ ದೂರು ದಾಖಲು: ಬಿಬಿಎಂಪಿಯ ಸಹಾಯ ಆ್ಯಪ್‌ನಲ್ಲಿ ಈ ವರ್ಷ ಜನವರಿಯಿಂದ ಅ.14ರ ವರೆಗೆ ಒಟ್ಟು 93,232 ದೂರುಗಳು ದಾಖಲಾಗಿದ್ದು, ಇದರಲ್ಲಿ 53,360 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನು 23,958 ದೂರುಗಳು ಪ್ರಗತಿ ಹಂತದಲ್ಲಿವೆ. ದಿರ್ಘಾವಧಿಯಲ್ಲಿ ಪರಿಹರಿಸ ಬೇಕಾಗಿರುವ 1,911 ದೂರುಗಳಿವೆ ಎಂದು ಗುರುತಿಸಲಾಗಿದೆ....

ಫೋಟೋ - http://v.duta.us/EVD7ywAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vzWdoAAA

📲 Get Bangalore City News on Whatsapp 💬