ಹದಗೆಟ್ಟ ರಸ್ತೆ: ಅಪಘಾತಕ್ಕೆ ಆಹ್ವಾನ

  |   Bangalore-Ruralnews

ದೇವನಹಳ್ಳಿ: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳು ಹದಗೆಟ್ಟು ಮಾರ್ಗ ಮಧ್ಯ ಗುಂಡಿಗಳು ಬಿದ್ದಿರುವುದರಿಂದ ನಗರದ ಜನ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ರಾಣಿ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದ ಗಿರಿಯಮ್ಮ ವೃತ್ತದ ವರೆಗೆ ಹಾಗೂ ಮಿನಿ ವಿಧಾನಸೌಧ ಮುಂಭಾಗ, ಹಳೇ ಬಸ್‌ ನಿಲ್ದಾಣ, ಶಿವ ಕುಮಾರಸ್ವಾಮಿ ವೃತ್ತ, ಡಿಮಾರ್ಟ್‌ ಮುಂಭಾಗ, ದೊಡ್ಡಬಳ್ಳಾಪುರ ರಸ್ತೆ ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದುದರಿಂದ ವಾಹನ ಸವಾರರು ಪರಿತಪಿಸುವಂತಾಗಿದೆ.

ವಾಹನ ದಟ್ಟಣೆ: ಇತ್ತೀಚಿಗೆ ದೇವನಹಳ್ಳಿ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಬೈಪಾಸ್‌ ರಸ್ತೆ ನಿರ್ಮಿಸಬೇಕಾಗಿದೆ.

ಧೂಳಿನಿಂದ ಕೂಡಿರುವ ರಸ್ತೆ: ರಸ್ತೆಯ ಗುಂಡಿಯ ಅಕ್ಕಪಕ್ಕದಲ್ಲಿ ಧೂಳಿನಿಂದ ಕೂಡಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರ ಮೈಯೆಲ್ಲಾ ಧೂಳಾಗುತ್ತಿದ್ದು, ಕಣ್ಣಿಗೆ ಧೂಳಿನ ಕಣಗಳು ಬೀಳುವುದರಿಂದ ವಾಹನ ಸವಾರರು ಆಯಾ ತಪ್ಪಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹಲವಾರು ಬಾರಿ ಗುಂಡಿಗಳನ್ನು ಮುಚ್ಚಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಲ್ಲಲ್ಲಿ ಒಂದೆರಡು ಗುಂಡಿಗಳನ್ನು ಮುಚ್ಚಿ ಹಾಗೆ ಬಿಡುವುದರಿಂದ 2-3 ದಿನಗಳಲ್ಲಿ ಮುಚ್ಚಿಸಿರುವ ಗುಂಡಿಗಳು ಮತ್ತೇ ಕಿತ್ತು ಹೋಗುತ್ತಿವೆ. ಸದ್ಯ ಮಳೆ ಬೀಳುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು, ಒಂದು ವೇಳೆ ಗುಂಡಿಗೆ ವಾಹನದ ಚಕ್ರ ಇಳಿದರೆ ಸವಾರರು ಬಿದ್ದು ಆಸ್ಪತ್ರೆ ಸೇರುವುದು ಖಚಿತ ಎಂದು ಸ್ಥಳೀಯ ನಾಗರೀಕರು ಹೇಳುತ್ತಾರೆ....

ಫೋಟೋ - http://v.duta.us/Qp3IngAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1AqzrAAA

📲 Get Bangalore Rural News on Whatsapp 💬