ಹೆಲಿಕಾಪ್ಟರ್ ಬಾರದ್ದರಿಂದ ಲಕ್ಷ್ಮಣ ಸವದಿ ಮೇಲೆ ಸಿಡಿಮಿಡಿಗೊಂಡ ಬಿಎಸ್ ವೈ

  |   Belgaumnews

ಬೆಳಗಾವಿ: ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್ ಬಾರದ ಕಾರಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಪ್ರಸಂಗ ಬುಧವಾರ ಬೆಳಗಾವಿಯಲ್ಲಿ ನಡೆಯಿತು.

ಪೂರ್ವ ನಿಗದಿಯಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಿಗ್ಗೆ 8.50 ಕ್ಕೆ ಮಹಾರಾಷ್ಟ್ರದ ಜತ್ ಗರ ಚುನಾವಣಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ಮಹಾರಾಷ್ಟ್ರ ದಿಂದ ಬರಬೇಕಿದ್ದ ಹೆಲಿಕಾಪ್ಟರ್ 11 ಗಂಟೆಯಾದರೂ ಬರಲಿಲ್ಲ. ಇದರಿಂದ ಅಸಮಾಧಾನ ಗೊಂಡ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿ ಗೆ ದೂರವಾಣಿ ಕರೆ ಮಾಡಿ ನಯವಾಗಿ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಬಹಳ ತಡವಾಯಿತು. ಅಲ್ಲಿಗೆ ಬಂದು ಏನು ಮಾಡಲಿ. ಬೆಂಗಳೂರಿಗೆ ಮರಳಿ ಹೋಗುತ್ತೇನೆ ಎಂದು ಹೇಳಿದರು. ಇದರಿಂದ ಗೊಂದಲಕ್ಕೊಳಗಾದ ಸವದಿ ದಯವಿಟ್ಟು ಕ್ಷಮಿಸಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಹೆಲಿಕಾಪ್ಟರ್ ಬರಲಿದೆ ಎಂದು ಸಮಜಾಯಿಷಿ ನೀಡಿದರು.

ಇದರಿಂದ ಬೇಸರಗೊಂಡ ಸಿ ಎಂ ನನಗೆ ಮೊದಲೇ ಆರೋಗ್ಯ ಸಮಸ್ಯೆ ಇದೆ. ಬಹಳ ತಡವಾದರೆ ಅಲ್ಲಿ ಬಂದು ಏನು ಮಾಡಲಿ ಎಂದು ಹೇಳಿ ಮತ್ತೆ ಪ್ರವಾಸಿ ಮಂದಿರದೊಳಗೆ ವಿಶ್ರಾಂತಿಗೆ ತೆರಳಿದರು. ಇದರಿಂದ ಅಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳು ಮುಜುಗುರ ಅನುಭವಿಸಬೇಕಾಯಿತು.

ಫೋಟೋ - http://v.duta.us/6zdLmQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/mzPIsgAA

📲 Get Belgaum News on Whatsapp 💬