ಹಾಲು ಉತ್ಪಾದಕ ಸಹಕಾರ ಸಂಘಗಳು ಕಂಪ್ಯೂಟರೀಕರಣ

  |   Kolar-Karnatakanews

ಮಾಲೂರು: ಪ್ರಸ್ತುತ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಾಲೂಕಿನ 169 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣ ಮಾಡುತ್ತಿರುವುದಾಗಿ ಶಾಸಕ ಹಾಗೂ ಕೋಚಿಮಲ್‌ ನ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಶಿಬಿರ ಕಚೇರಿಯಲ್ಲಿ ತಾಲೂಕಿನ 6 ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಪ್ರಥಮ ಹಂತದಲ್ಲಿ 1.37 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್‌ ಹಾಲಿನ ತೂಕದ ಯಂತ್ರ, ಸ್ವಯಂ ಹಾಲು ಶೇಖರಣ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಸೋರಿಕೆಗೆ ತಡೆ: ಪ್ರಸ್ತುತ ಆರಂಭವಾಗಿರುವ ಕಂಪ್ಯೂಟರೀಕರಣದಿಂದ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾಗದ ರಹಿತ ವಾಹಿವಾಟು ನಡೆಸುವ ಜೊತೆಗೆ ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿ, ಸೋರಿಕೆ ಹಾಗೂ ಹಣದ ವರ್ಗಾವಣೆ ನೆರವಾಗಿ ನಡೆಸಲು ಸಾಧ್ಯವಾಗಲಿದೆ ಎಂದರು.

3 ಲಕ್ಷ ರೂ. ಸಹಾಯಧನ: ಪ್ರಸ್ತುತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾಲೂರು ತಾಲೂಕಿನ ಹಾಲು ಉತ್ಪಾದನೆ ಮತ್ತು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ತಾಲೂಕಿನಲ್ಲಿ 105 ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಂತ ಕಟ್ಟಡವನ್ನುಹೊಂದಿವೆ. ಇನ್ನೂ 64 ಸಂಘಗಳಿಗೆ ನಿವೇಶನ ಈಗಾಗಲೇ ಇದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ 3 ಲಕ್ಷ ರೂ. ಸಹಾಯಧನವನ್ನು ಕೋಚಿಮುಲ್‌ನಿಂದ ನೀಡುತ್ತಿರುವುದಾಗಿ ಅವರು ತಿಳಿಸಿದರು....

ಫೋಟೋ - http://v.duta.us/4aSsXwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YsIlrAAA

📲 Get Kolar Karnataka News on Whatsapp 💬