12 ಬ್ಲಾಕ್‌ಗಳಲ್ಲಿ ಇಂದಿನಿಂದ ಮರಳುಗಾರಿಕೆ ಸ್ಥಗಿತ

  |   Dakshina-Kannadanews

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದ 22 ಮರಳು ದಿಬ್ಬಗಳ ಪೈಕಿ ಮೊದಲ ಹಂತದಲ್ಲಿ ಮರಳುಗಾರಿಕೆ ಆರಂಭಗೊಂಡಿದ್ದ 12 ಮರಳು ದಿಬ್ಬಗಳಲ್ಲಿ ಪರವಾನಿಗೆ ಅವಧಿ ಅ.15ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಸ್ಥಗಿತಗೊಳ್ಳಲಿದೆ.

2ನೇ ಹಂತದಲ್ಲಿ 10 ದಿಬ್ಬಗಳ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದ್ದು, ಅವಧಿ ಡಿ.25ಕ್ಕೆ ಪೂರ್ಣಗೊಳ್ಳಲಿದೆ. ಹೀಗಾಗಿ ಈ 10 ದಿಬ್ಬ ಬಿಟ್ಟು ಜಿಲ್ಲೆಯಲ್ಲಿ ಬುಧವಾರದಿಂದ ಮರಳುಗಾರಿಕೆಗೆ ಅವಕಾಶವಿರುವುದಿಲ್ಲ. ಹೊಸದಾಗಿ ಬೇಥಮೆಟ್ರಿಕ್‌ ಸರ್ವೇ ನಡೆದು, ಮರಳು ದಿಬ್ಬ ಗುರುತಿಸಿ, ಪರಿಸರ ಇಲಾಖೆಯ ಅನುಮತಿ ಪಡೆದ ಬಳಿಕ ಆರಂಭಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಗಳಿಗೆ ಕನಿಷ್ಠ ಸುಮಾರು 2ತಿಂಗಳು ಬೇಕು. ಹೀಗಾಗಿ ಮುಂದಿನ ಫೆಬ್ರವರಿ ಮಧ್ಯಭಾಗದಲ್ಲಷ್ಟೇ ಮರಳುಗಾರಿಕೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಕಳೆದ ಬಾರಿಯ ಸರ್ವೇಯಲ್ಲಿ ನೇತ್ರಾವತಿಯಲ್ಲಿ ಒಟ್ಟು 13 ಬ್ಲಾಕ್‌ಗಳನ್ನು ಗುರುತಿಸಿ, 4,30,357 ಮೆ. ಟನ್‌ ಮರಳು ಇದ್ದು, 43,027 ಲಾರಿ ಲೋಡ್‌ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ಫಲ್ಗುಣಿ ನದಿಯಲ್ಲಿ ಒಟ್ಟು 9 ಬ್ಲಾಕ್‌ಗಳನ್ನು ಗುರುತಿಸಿ 4,20,270 ಮೆ. ಟನ್‌ ಮರಳಿದ್ದು, 42,027 ಲಾರಿ ಲೋಡ್‌ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ಒಟ್ಟು 22 ಬ್ಲಾಕ್‌ಗಳಲ್ಲಿ 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು....

ಫೋಟೋ - http://v.duta.us/5jPHbgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/51pJsQAA

📲 Get Dakshina Kannada News on Whatsapp 💬