38.50 ಲಕ್ಷ ರೂ. ಕಾಣಿಕೆ ಸಂಗ್ರಹ

  |   Chitradurganews

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಮುಖ ದೇವಾಲಯವಾಗಿರುವ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹುಂಡಿ ಎಣಿಕಾ ಕಾರ್ಯ ನಡೆಯಿತು. ಒಟ್ಟು 38.50 ಲಕ್ಷ ರೂ. ಕಾಣಿಕೆ ಸಂಗ್ರಹಗೊಂಡಿದೆ.

ಒಳಮಠದ ಹುಂಡಿಗಳಲ್ಲಿ 30,51,395 ರೂ., ಹೊರಮಠದ ಹುಂಡಿಗಳಲ್ಲಿ 5,13,270 ರೂ. ಹಾಗೂ ದಾಸೋಹದ ಹುಂಡಿಯಲ್ಲಿ 2,85,415 ರೂ. ಸೇರಿದಂತೆ ಎರಡು ದೇವಾಲಯ ಹಾಗೂ ದಾಸೋಹದ ಹುಂಡಿಗಳಲ್ಲಿ ಒಟ್ಟು 38,50,080 ರೂ. ಸಂಗ್ರಹವಾಗಿದೆ.

ಕಳೆದ ವರ್ಷ ನವೆಂಬರ್‌ 22 ರಂದು ಕಾಣಿಕೆ ಎಣಿಕೆ ಮಾಡಿದಾಗ 45,23,301 ರೂ. ದೇಣಿಗೆ ಹಣವನ್ನು ಭಕ್ತರು ನೀಡಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತ ಒಂದು ತಿಂಗಳು ಮುಂಚೆ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಹೀಗಾಗಿ 6,73,221 ರೂ. ಕಡಿಮೆ ಹಣ ಸಂಗ್ರಹವಾಗಿದೆ.

ಬೆಳ್ಳಿ ವಸ್ತುಗಳೇ ಹೆಚ್ಚು: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದರು. ಬೆಳ್ಳಿಯ ಕಣ್ಣು, ತೊಟ್ಟಿಲು, ನಾಗರ ಹೆಡೆ, ಉಂಗುರ, ಛತ್ರಿ, ಪಾದುಕೆ, ತಟ್ಟೆ, ಇಷ್ಟಲಿಂಗದ ಕರಡಿಗೆ, ಮೀಸೆ ಸೇರಿದಂತೆ ನಾನಾ ವಸ್ತುಗಳಿದ್ದವು. ಮಕ್ಕಳಾಗಲಿ ಎಂದು ಹರಕೆ ಸಲ್ಲಿಸಿದವರು ಬೆಳ್ಳಿ ತೊಟ್ಟಿಲನ್ನು ಅರ್ಪಿಸುತ್ತಾರೆ....

ಫೋಟೋ - http://v.duta.us/pgw4hAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ULTCawAA

📲 Get Chitradurga News on Whatsapp 💬