ಅರ್ಧ ವರ್ಷ ಕಳೆದರೂ ಕನ್ನಡ ಪಠ್ಯ ಪುಸ್ತಕ ಸಿಕ್ಕಿಲ್ಲ !

  |   Udupinews

ಕುಂದಾಪುರ: ಶಿಕ್ಷಣದ ಗುಣಮಟ್ಟ ಸುಧಾರಣೆ, ಬಡ ಮಕ್ಕಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಆಶಯದೊಂದಿಗೆ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದೆ. ಆದರೆ ಅರ್ಧ ವಾರ್ಷಿಕ ರಜೆ ಮುಗಿದು ಶಾಲಾರಂಭವಾಗುತ್ತಿದ್ದರೂ ಇನ್ನೂ ಈ ಮಕ್ಕಳಿಗೆ ಕನ್ನಡ ಪಠ್ಯಪುಸ್ತಕವೇ ಸಿಕ್ಕಿಲ್ಲ.

ದ.ಕ. ಜಿಲ್ಲೆಯ 42, ಉಡುಪಿ ಜಿಲ್ಲೆಯ 22 ಸರಕಾರಿ

ಪ್ರಾಥಮಿಕ ಶಾಲೆಗಳ ಸಹಿತ ರಾಜ್ಯಾದ್ಯಂತ 1 ಸಾವಿರ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದ್ದು ಒಟ್ಟಾರೆ ಒಂದನೇ ತರಗತಿಯಲ್ಲಿ 25,156 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೇರೆ ಎಲ್ಲ ಪಠ್ಯ ಪುಸ್ತಕಗಳನ್ನು ನೀಡಲಾಗಿದ್ದರೂ ಮಾತೃಭಾಷೆ ಕನ್ನಡ ಬೋಧನೆಯ "ಸವಿಕನ್ನಡ' ಪಠ್ಯಪುಸ್ತಕ ಮಾತ್ರ ಪೂರೈಸಿಲ್ಲ.

ಬೇರೆ - ಬೇರೆ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬೋಧಿಸುವ "ನಲಿ- ಕಲಿ' ಪಠ್ಯ ಪುಸ್ತಕ ಹಾಗೂ ಆಂಗ್ಲ ಮಾಧ್ಯಮದ 1ನೇ ತರಗತಿ ಮಕ್ಕಳಿಗೆ ಕಲಿಸುವ "ಸವಿಕನ್ನಡ' ಪಠ್ಯ ಪುಸ್ತಕದಲ್ಲಿರುವ ಪಠ್ಯ ಕ್ರಮಗಳು ಬೇರೆ ಬೇರೆಯಾಗಿವೆ. ಆದ್ದರಿಂದ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ತರಬೇತಿ ವೇಳೆ ನೀಡಿದ ಪ್ರತಿಗಳನ್ನು ತಂದು ಪಾಠ ಮಾಡುತ್ತಿರುವುದಾಗಿ ಶಿಕ್ಷಕರೊಬ್ಬರು ತಿಳಿಸಿದ್ದಾರೆ....

ಫೋಟೋ - http://v.duta.us/niycHgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NpHsbQAA

📲 Get Udupi News on Whatsapp 💬