ಉತ್ಸವಕ್ಕಾಗಿ ಅಂದು ಹೋರಾಟ ಇಂದು ಮೌನ!

  |   Bellarynews

„ವೆಂಕೋಬಿ ಸಂಗನಕಲ್ಲು

ಬಳ್ಳಾರಿ: ಕಳೆದ ವರ್ಷದಂತೆ ಈ ಬಾರಿಯೂ ಐತಿಹಾಸಿಕ ಹಂಪಿ ಉತ್ಸವ ಆಚರಣೆ ಬಗ್ಗೆ ಸರಕಾರದಿಂದ ಅಧಿಕೃತ ಘೋಷಣೆಯಾಗದಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಚಕಾರವೆತ್ತದಿದ್ದರೂ ಕಲಾವಿದರು, ಜನಪ್ರತಿನಿಧಿಗಳು ಸುಮ್ಮನಿರುವುದು ಅಚ್ಚರಿ ಮೂಡಿಸಿದೆ.

ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ಹಂಪಿ ಉತ್ಸವ ಆಚರಣೆಗೆ ಕಳೆದ ಕೆಲ ವರ್ಷಗಳಿಂದ ಬರದ ನೆಪವೊಡ್ಡಲಾಗುತ್ತಿದೆ. 2018ರಲ್ಲೂ ಬರ, ಉಪಚುನಾವಣೆ ನೆಪವೊಡ್ಡಿ ಉತ್ಸವ ಮುಂದೂಡಲು ನಿರ್ಧರಿಸಲಾಗಿತ್ತು. ಆಗ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಕಲಾವಿದರು, ಕನ್ನಡಪರ ಸಂಘಟನೆಗಳ ಸದಸ್ಯರು, ಸ್ವಾಮೀಜಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಶಾಸಕ ಜಿ. ಸೋಮಶೇಖರರೆಡ್ಡಿ ಸೇರಿದಂತೆ ಕೆಲವರು ಹಂಪಿ ಉತ್ಸವ ಆಚರಣೆಗೆ ಹಣದ ತೊಂದರೆಯಾಗಿದ್ದರೆ ಭಿಕ್ಷೆ ಬೇಡಿ ನೀಡುವುದಾಗಿ ಹೇಳಿದ್ದರು.

ಬಳ್ಳಾರಿಯ ಕೆಲ ಕಲಾವಿದರ ಸಂಘಟನೆಗಳು ಹೊಸಪೇಟೆಯಿಂದ ಹಂಪಿಗೆ ಪಾದಯಾತ್ರೆ ನಡೆಸಿ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ಬಿಡದೆ ಸರಳವಾಗಿಯಾದರೂ ಆಚರಿಸಬೇಕು ಎಂದು ಒತ್ತಾಯಿಸಿದ್ದವು. ಇದಕ್ಕೆ ಮಣಿದಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌, ಅಂದಿನ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಎರಡು ದಿನ ಉತ್ಸವ ಆಚರಿಸುವುದಾಗಿ ಘೋಷಿಸಿದ್ದರು....

ಫೋಟೋ - http://v.duta.us/s5DyCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/yH4z8wAA

📲 Get Bellary News on Whatsapp 💬