ಕೆಡಿಪಿ ಸಭೆ ದಿಢೀರ್‌ ಮುಂದೂಡಿಕೆ

  |   Kalburaginews

„ಹಣಮಂತ ರಾವ್‌ ಭೈರಾಮಡಗಿ

ಕಲಬುರಗಿ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬದಲಾದ ನಂತರ ಆಡಳಿತ ಕಾರ್ಯವೈಖರಿಯಲ್ಲಿ ಸ್ವಲ್ಪಾದರೂ ಬದಲಾವಣೆಯಾಗಬಹುದು ಎಂಬ ಜನರ ನಿರೀಕ್ಷೆ ಸುಳ್ಳಾಗುತ್ತಿದೆಯೇ ಎಂಬುದಕ್ಕೆ ಕೆಡಿಪಿ ಸಭೆ ನಡೆಸಲು ಮುಂದಾಗದಿರುವುದು, ಹಿಂದೆ ಮುಂದೆ ನೋಡದೇ ತಮಗೆ ಅನುಕೂಲವಾಗಬಲ್ಲ ಅಧಿಕಾರಿಗಳಿಗೆ ಮಣೆ ಹಾಕುತ್ತಿರುವುದು ಜತೆಗೆ ಆಡಳಿತ ಚುರುಕುಗೊಳ್ಳದಿರುವುದೇ ಇದಕ್ಕೆ ಪ್ರಮುಖ ಸಾಕ್ಷಿ ಎನ್ನಬಹುದಾಗಿದೆ.

ಈ ಹಿಂದೆ ಪ್ರಿಯಾಂಕ್‌ ಖರ್ಗೆ ಅವರು ಒಂದು ವರ್ಷದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವಾವಧಿಯಲ್ಲಿ ಕೇವಲ ಒಂದೇ ಕೆಡಿಪಿ ಸಭೆ ನಡೆಸಿದ್ದರು. ಈಗ ಬಿಜೆಪಿ ಸರ್ಕಾರ ಬಂದು ಎರಡೂವರೆ ತಿಂಗಳು ತಿಂಗಳಾದರೂ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿ ತಿಂಗಳಾದರೂ ಕೆಡಿಪಿ ಸಭೆ ನಡೆಸುವ ಘಳಿಗೆ ಇನ್ನೂ ಕೂಡಿ ಬರುತ್ತಿಲ್ಲ.

ಉಮುಖ್ಯಮಂತ್ರಿಗಳಾಗಿರುವ ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಖಾತೆ ಜತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಳಜೋಳ ಅವರ ಅಧ್ಯಕ್ಷತೆಯಲ್ಲಿ ಅ. 17ರಂದು ನಿಗದಿಯಾಗಿದ್ದ ಕೆಡಿಪಿ ಸಭೆಯನ್ನು ದಿಢೀರ್‌ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಬದಲು ಅಧಿಕಾರಿಗಳ ಸಭೆ ಮಾತ್ರ ನಡೆಸಲಾಗುತ್ತಿದೆ....

ಫೋಟೋ - http://v.duta.us/tfVIcAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Bxw_kAAA

📲 Get Kalburagi News on Whatsapp 💬