ಕಾವೇರಿ ತೀಥೋìದ್ಭವ ಹಿನ್ನೆಲೆ: ತಲಕಾವೇರಿ-ಭಾಗಮಂಡಲ ಸ್ವತ್ಛತೆ

  |   Kodagunews

ಭಾಗಮಂಡಲ: ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿಅ.18 ರಂದು ಸಂಭವಿಸುವ ಪವಿತ್ರ ಕಾವೇರಿ ತೀಥೋìದ್ಭವ ಹಿನ್ನೆಲೆಯಲ್ಲಿ ಮಂಗಳವಾರ ಗ್ರೀನ್‌ ಸಿಟಿ ಫೋರಂ ಸಂಘಟನೆ ನೇತೃತ್ವದಲ್ಲಿ ತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವತ್ಛತಾ ಕಾರ್ಯ ನಡೆಯಿತು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ವಿದ್ಯಾರ್ಥಿಗಳು, ಕ್ಲೀನ್‌ ಕೂರ್ಗ್‌ ಇನ್ಸೆಟಿವ್‌ (ಸಿಸಿಐ) ಸಂಘಟನೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಲಕಾವೇರಿ ಕ್ಷೇತ್ರದ ಪ್ರವೇಶದ್ವಾರದಿಂದ ಸ್ವತ್ಛತೆ ಪ್ರಾರಂಭಿಸಲಾಯಿತು. ರಸ್ತೆ ಎರಡು ಬದಿಯಲ್ಲಿದ್ದ ಬಾಟಲಿ, ಪ್ಲಾಸ್ಟಿಕ್‌ ವಸ್ತುಗಳನ್ನು ಹೆಕ್ಕುವುದರ ಮೂಲಕ ಸ್ವತ್ಛಗೊಳಿಸಲಾಯಿತು. ಈ ವೇಳೆ ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರಿಗೆ ಸ್ವತ್ಛತೆ ಕಾಪಾಡುವಂತೆ ಮನವಿ ಮಾಡಲಾಯಿತು. ದಕ್ಷಿಣ ಭಾರತದ ಜೀವನದಿ ಕಾವೇರಿ ಕ್ಷೇತ್ರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶ ರವಾನಿಸಲಾಯಿತು. ನಾಲ್ಕು ವರ್ಷದಿಂದ ಕಾವೇರಿತೀಥೋìದ್ಭವಕ್ಕೆ ಮುನ್ನ ತಲಕಾವೇರಿಯಿಂದ ಭಾಗಮಂಡಲದವರೆಗೂ ಸ್ವತ್ಛತೆ ಮಾಡಲಾಗುತ್ತಿದೆ. ನಮ್ಮ ನಡೆ ಸ್ವತ್ಛತೆ ಕಡೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಸ್ವತ್ಛತೆ ಮಾಡಲಾಗುತ್ತಿದೆ ಎಂದು ಗ್ರೀನ್‌ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳಿದರು.

ಸ್ವತ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪವಿತ್ರ ಕ್ಷೇತ್ರವನ್ನು ಸ್ವತ್ಛವಾಗಿಟ್ಟುಕೊಳ್ಳಲು ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕೆಂದು ಗ್ರೀನ್‌ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹೇಳಿದರು....

ಫೋಟೋ - http://v.duta.us/7MyT_wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/UbwvHwEA

📲 Get Kodagu News on Whatsapp 💬