ಕುಸಿದ ಬಾವಿಗೆ ಕಾಯಕಲ್ಪ ಕಲ್ಪಿಸಿದ ಕಟಪಾಡಿ ಗ್ರಾಮ ಪಂಚಾಯತ್‌

  |   Udupinews

ಕಟಪಾಡಿ: ಅಚ್ಚಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಸಿದು ಅಪಾಯಕಾರಿ ಸ್ಥಿತಿ ಯಲ್ಲಿದ್ದ ಕುಸಿದ ಬಾವಿಗೆ ಕಟಪಾಡಿ ಗ್ರಾ.ಪಂ. ಹೆಚ್ಚಿನ ಮುತುವರ್ಜಿಯಿಂದ ಕಾಯಕಲ್ಪ ಕಲ್ಪಿಸಲಾಗಿದೆ.

ಶಾಲಾವರಣದೊಳಗೆ ಶಾಲಾ ಕೊಠಡಿಗಳ ಪಕ್ಕದಲ್ಲಿಯೇ ಇದ್ದ ಈ ಬಾವಿ ಮಳೆಯ ತೀವ್ರತೆಗೆ ಕುಸಿತಕ್ಕೊಳಗಾಗಿ ಅಪಾಯಕಾರಿ ಸ್ಥಿತಿಯಲ್ಲಿತ್ತು. ಬಾವಿಯ ಕಟ್ಟೆಯೂ ಕುಸಿಯುತ್ತಿತ್ತು. ನಿತ್ಯ ಬಳಸುವ ಈ ಬಾವಿಯಿಂದಾಗಿ ಶಾಲಾ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿತ್ತು. ಅಪಾಯದ ಸೂಚನೆಯನ್ನು ನೀಡುತ್ತಿರುವ ಬಗ್ಗೆ ಉದಯವಾಣಿಯು ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು.

ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಲ್ಲಿರುವ ಏಕೈಕ ಸರಕಾರಿ ಕನ್ನಡ ಮಾಧ್ಯಮ ಶಾಲೆ ಇದಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಿದ ಕಟಪಾಡಿ ಗ್ರಾಮ ಪಂಚಾಯತ್‌ ವಾರ್ಡು ಸದಸ್ಯರಾದ ರಾಜೇಶ್‌ ಪೂಜಾರಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಸುಭಾಶ್‌ ಬಲ್ಲಾಳ್‌, ಪ್ರತಿಭಾ ಸುವರ್ಣ ಅವರು ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಜತೆಗೆ ಸುರಕ್ಷತೆಯನ್ನೂ ಒದಗಿಸಬೇಕೆಂಬ ಆದ್ಯತೆಯ ಮೇರೆಗೆ ಪಂಚಾಯತ್‌ ಅನುದಾನವನ್ನು ಬಳಸಿಕೊಂಡು ದುಃಸ್ಥಿತಿಯಲ್ಲಿದ್ದ ಈ ಬಾವಿಯನ್ನು ಸುಸ್ಥಿತಿಗೆ ತಂದಿರುತ್ತಾರೆ.

ಕಳೆದ 2018ರ ಸಾಲಿನ ಮಳೆಗಾಲದಲ್ಲಿ ಈ ಶಾಲೆಯ ಆವರಣಗೋಡೆಯು ನೆರೆಯ ಹಾವಳಿಯಿಂದ ಕುಸಿದು ಬಿದ್ದು ಸಾಕಷ್ಟು ಹಾನಿ ಸಂಭವಿಸಿತ್ತು. ಇದರೊಂದಿಗೆ ಶೌಚಾಲಯದ ಭಾಗ ಮತ್ತು ಬಾವಿಯ ಕಟ್ಟೆ, ಒಳಗೂ ಕುಸಿತ ಕಂಡು ಬಂದಿತ್ತು. ಜಿ.ಪಂ. ಸದಸ್ಯರ ಅನುದಾನದಿಂದ ಈ ಶಾಲೆಯ ಆವರಣ ಗೋಡೆಯು ಮತ್ತೆ ಎದ್ದು ನಿಂತಿದೆ. ಆದರೆ ಬಾವಿ ದುರಸ್ತಿ ಕಂಡಿರಲಿಲ್ಲ....

ಫೋಟೋ - http://v.duta.us/TQmunQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_512tQAA

📲 Get Udupi News on Whatsapp 💬