ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಕಚೇರಿ ಮೇಲೆ ಎಸಿಬಿ ದಾಳಿ ಇಬ್ಬರು ಬಲೆಗೆ

  |   Karnatakanews

ಚಿಕ್ಕಬಳ್ಳಾಪುರ: ಭೂ ವರ್ತನೆಗೊಂಡ ನಿವೇಶಗಳನ್ನು ಬಿಡುಗಡೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಸದಸ್ಯರು ಬರೋಬರಿ 3 ಲಕ್ಷ ರೂ. ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬಂಧಿತರ ಪೈಕಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಸಿವಿಲ್ ಇಂಜಿನಿಯರ್ ಹೆಚ್.ಆರ್.ಕೃಷ್ಣಪ್ಪ ಹಾಗೂ ಹಣ ಪಡೆಯುತ್ತಿದ್ದ ಅಚುತ್ ಕುಮಾರ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಹೆಗಡೆ ನಗರದ ನಿವಾಸಿ ರಾಮಾಂಜನಪ್ಪ ಎಂಬುವರು ಎಸಿಬಿಗೆ ಈ ಕುರಿತು ದೂರು ನೀಡಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಕುಪ್ಪಳ್ಳಿ ಸಮೀಪ ಮಾಡಲಾಗಿರುವ ಹೊಸ ಬಡಾಬಣೆಯಲ್ಲಿ ಈಗಾಗಲೇ ಶೇ.60 ನಿವೇಶನಗಳನ್ನು ಬಿಡುಗಡೆಗೊಳಿಸಿರುವ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಉಳಿದ ಶೇ.40 ರಷ್ಡು ನಿವೇಶನಗಳ ಬಿಡುಗಡೆ ಮಾಡಲು ೮ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಗುರುವಾರ ಮದ್ಯಾಹ್ನ ಕೂಡಾದ ಸದಸ್ಯರಾಗಿರುವ ಹೆಚ್.ಆರ್.ಕೃಷ್ಣಪ್ಪ ಬೇಡಿಕೆಯಂತೆ ಮೊದಲ ಕಂತಾಗಿ ಅಚುತ್ ಕುಮಾರ್ ಕೂಡಾದ ಕಚೇರಿಯಲ್ಲಿ 3 ಲಕ್ಷ ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿವೈಎಸ್ಪಿ ವೆಂಕಟೇಶ್ ನಾಯ್ಡ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಮೀದೇವಮ್ಮ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿತು.

ಫೋಟೋ - http://v.duta.us/1BdTEgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/9NXTSgAA

📲 Get Karnatakanews on Whatsapp 💬