ನೆರೆಗೆ ಮೇಲೆ ನೆರೆಗೆ ನಲುಗಿದ ಜನತೆ

  |   Mysorenews

ಹುಣಸೂರು: ಕಳೆದ ತಿಂಗಳು ಸಂಭವಿಸಿದ್ದ ಪ್ರವಾಹದಿಂದ ತಾಲೂಕಿನ ಜನತೆ ಇನ್ನು ಚೇತರಿಸಿಕೊಂಡಿಲ್ಲ. ಇದರ ಬೆನ್ನಲೇ ನಿತ್ಯ ಸುರಿಯುತ್ತಿರುವ ಮಳೆ ಜೊತೆಗೆ ಮಂಗಳವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಗೆ ಹಲವಾರು ಮನೆಗಳು, ಬೃಹತ್‌ ಗಾತ್ರದ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಲ್ಲದೇ ತೆಂಗಿನ ಮರಗಳು, ಅಡಕೆ, ಬಾಳೆ ಬೆಳೆ ನೆಲಕಚ್ಚಿದ್ದು, ಜಮೀನುಗಳು ಜಲಾವೃತವಾಗಿವೆ.

ತಾಲೂಕಿನ ಕಸಬಾ, ಹನಗೋಡು, ಗಾವಡಗೆರೆ ಹೋಬಳಿಯಾದ್ಯಂತ ಮಂಗಳವಾರ ರಾತ್ರಿ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಮರಗಳು, 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಕಳೆದ ಒಂದು ವಾರದಿಂದ ರಾತ್ರಿ ವೇಳೆಯೇ ಹೆಚ್ಚು ಮಳೆ ಬೀಳುತ್ತಿದ್ದು, ಮುಂಗಾರಿನಲ್ಲಿ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಹೆಚ್ಚು ನಷ್ಟ ಉಂಟಾಗಿತ್ತು. ಮಂಗಳವಾರ ರಾತ್ರಿ ಸುರಿದ ಜೋರು ಮಳೆ-ಬಿರುಗಾಳಿಯಿಂದಾಗಿ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮರಗಳು ಉರುಳಿ ಬಿದ್ದು ಹೆದ್ದಾರಿ ಸೇರಿದಂತೆ ಕೆಲವೆಡೆ ರಸ್ತೆ ಬಂದ್‌ ಆಗಿತ್ತು. ಮನೆಗಳು-ಶಾಲೆ ಮೇಲೆ ಮರ ಬಿದ್ದು ಸಾಕಷ್ಟು ಹಾನಿಯಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಬೆಳೆಗಳು ಜಲಾವೃತ್ತವಾಗಿವೆ. ರಸ್ತೆಗಳು ಕೊಚ್ಚಿ ಹೋಗಿವೆ....

ಫೋಟೋ - http://v.duta.us/vPyxHwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/qncw0wAA

📲 Get Mysore News on Whatsapp 💬