ಪುಸ್ತಕ ಪ್ರೇಮಿಗಳಿಗೆ ಗ್ರಂಥಾಲಯ ಕೊರತೆ

  |   Koppalnews

ಕನಕಗಿರಿ: ಜ್ಞಾನಾರ್ಜನೆಯ ಮೂಲ ಗ್ರಂಥಾಲಯ. ಪತ್ರಿಕೆಗಳು ಜೊತೆಗೆ ಸಾಹಿತ್ಯ, ಕವನ ಸೇರಿದಂತೆ ವಿವಿಧ ಪುಸ್ತಕ ಓದಬೇಕಾದ ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ಪಟ್ಟಣದಲ್ಲಿ ಸೂಕ್ತ ಗ್ರಂಥಾಲಯ ಸೌಲಭ್ಯ ಇಲ್ಲದಂತಾಗಿದೆ.

ಪಟ್ಟಣದಲ್ಲಿ ಪದವಿ, ಪಿಯುಸಿ ಸೇರಿದಂತೆ ವಿವಿಧ ಕಾಲೇಜುಗಳು ಇವೆ. ಶಿಕ್ಷಕರು ಪಟ್ಟಣದಲ್ಲೇ ವಾಸವಾಗಿದ್ದು, ಓದುಗರ ಸಂಖ್ಯೆ ಹೆಚ್ಚಿದೆ. ಆದರೆ ತಾಲೂಕು ಕೇಂದ್ರವಾಗಿರುವ ಕನಕಗಿರಿಗೆ ಒಂದು ಉತ್ತಮ ಗ್ರಂಥಾಲಯ ಅವಶ್ಯಕತೆ ಇದೆ.

ಕನಕಗಿರಿಯಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯವೂ ಮೊದಲು ಗ್ರಾಪಂನಲ್ಲಿ ಪ್ರಾರಂಭಿಸಲಾಗಿತ್ತು. ಕಳೆದ 15 ವರ್ಷಗಳಿಂದ ಕನಕಾಚಲಪತಿ ದೇವಸ್ಥಾನದ ಹಿಂದೆ ಇರುವ ಗಾಂಧಿ ಭವನಕ್ಕೆ ಸ್ಥಳಾಂತರಿಸಲಾಯಿತು. ಸೂಕ್ತವಾದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ.

ಸೌಲಭ್ಯ ಕೊರತೆ: ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದಂತಾಗಿದೆ. ಇದರಿಂದ ಗಾಂಧಿ

ಭವನದಲ್ಲಿ ಗ್ರಂಥಾಲಯವನ್ನು ನಡೆಸಲಾಗುತ್ತಿದ್ದು,

ಮಳೆ ಬಂದ ಸಂದರ್ಭದಲ್ಲಿ ಸೋರುತ್ತದೆ. ಗ್ರಂಥಾಲಯದಲ್ಲಿ ಕುರ್ಚಿಗಳು, ಪುಸ್ತಕಗಳನ್ನು ಜೋಡಿಸಲು ಅಲಮೆರಾಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಒದಗಿಸಿಲ್ಲ. ಗ್ರಂಥಾಲಯ 5200 ಪುಸ್ತಕವಿದ್ದು, ಅದರಲ್ಲಿ ಅರ್ಧದಷ್ಟು ಪುಸ್ತಕಗಳು ಹಾಳಾಗಿವೆ. ಜ್ಞಾನಾರ್ಜನೆಗೆ ಮೂಲವಾಗಬೇಕಾದ ಗ್ರಂಥಾಲಯವೂ ಮೂಲ ಸೌಲಭ್ಯವಿಲ್ಲದೇ ಸೊರಗುತ್ತಿದೆ....

ಫೋಟೋ - http://v.duta.us/g-C5ygAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CZ5JiQAA

📲 Get Koppal News on Whatsapp 💬