ಬದುಕಿನ ಬಂಡಿ ದೂಡದ ಟಾಂಗಾ

  |   Bijapur-Karnatakanews

ಜಿ.ಎಸ್‌. ಕಮತರ

ವಿಜಯಪುರ: ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀ ಅವನು ಪೇಳªಂತೆ ಪಯಣಿಗರು, ಮದುವೆಗೋ, ಮಸಣಕೋ, ಹೋಗೆಂದ ಕಡೆ ಪದ ಕುಸಿಯೋ ಎಂಬುದು ಡಿ.ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಈ ಮಾತು ವಿಜಯಪುರ ನಗರದಲ್ಲಿರುವ ಪಾರಂಪರಿಕ ಸಾರಿಗೆ ಜಟಕಾ ಬಂಡಿ ನಂಬಿರುವ ನೂರಾರು ಕುಟುಂಗಳ ಬಾಳಿನಲ್ಲಿ ಸತ್ಯವಾಗಿದೆ. ತಲೆಮಾರುಗಳಿಂದ ಕುದುರೆ-ಜಟಕಾ ನಂಬಿರುವ ಕುಟುಂಬಗಳಿಗೆ ಕನಿಷ್ಠ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ವಿಧಿ ಎಂಬ ಸಾಹೇಬ ತೋರುವ ಮಾರ್ಗದಲ್ಲಿ ಸಾಗುತ್ತಿರುವ ಈ ಸಾರಿಗೆ ಪರಂಪರೆ ಇಲ್ಲಿಗೆ ಮುಗಿದು ಹೋಗುವ ಅಪಾಯ ಕಾಡುವಂತೆ ಮಾಡಿದೆ.

ಪಾರಂಪರಿಕ ನಗರಿ ವಿಜಯಪುರದಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು, ಇದರಲ್ಲಿ ಪಾರಂಪರಿಕ ಸಾರಿಗೆ ಜಟಕಾ ಬಂಡಿಯೂ ಒಂದು. ಈ ಜಿಲ್ಲೆಗೆ ಗೋಲಗುಮ್ಮಟಕ್ಕೆ ಇರುವಂತೆ ಟಾಂಗಾ ಎಂದು ಕರೆಸಿಕೊಳ್ಳುವ ಪಾರಂಪರಿಕ ಸಾರಿಗೆಗೂ ವಿಶೇಷತೆ ಇದೆ. ಇದೇ ವೇಳೆ ಜಿಲ್ಲೆಯಲ್ಲಿ ಪಾರಂಪರಿಕ ಸ್ಮಾರಕಗಳು ನಿರ್ವಹಣೆ ಇಲ್ಲದ ನಿರ್ಲಕ್ಷ್ಯದಿಂದ ಅವಸಾನದ ಹಾದಿ ಹಿಡಿದಿರುವಂತೆ ಜಟಕಾ ಬಂಡಿಯ ಸಾರಿಗೆ ಪರಂಪರೆ ಕೂಡ ಕೆಲವೇ ದಿನಗಳಲ್ಲಿ ಮುಗಿದು ಹೋಗುವ ಭೀತಿ ಎದುರಿಸುತ್ತಿದೆ....

ಫೋಟೋ - http://v.duta.us/uOUqAQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/p2PChAAA

📲 Get Bijapur Karnataka News on Whatsapp 💬