ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಹೋಗಿ ಪ್ರಾಣಬಿಟ್ಟ ವಿದ್ಯಾರ್ಥಿ

  |   Bangalore-Citynews

ವಿಜಯವಾಡ/ಬೆಂಗಳೂರು: ಮೆದುಳಿನ ಸಾಮರ್ಥ್ಯ ಹೆಚ್ಚಳಕ್ಕಾಗಿ ವಿಶೇಷ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿದ್ದ ನಕಲಿ ನಾಟಿ ವೈದ್ಯನ ಮಾತಿಗೆ ಮರುಳಾದ ಆಂಧ್ರಪ್ರದೇಶದ ಗುಂಟೂರಿನ ಹರನಾಥ್‌ (15) ಎಂಬ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡದ ಗವರ್ನರ್‌ ಪೇಟ್‌ ಪ್ರಾಂತ್ಯದಲ್ಲಿ ನಡೆದಿದೆ.

ಈತನ ಮಾತಿಗೆ ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಪೋಷಕರೂ ಮರುಳಾಗಿದ್ದರು. ಹಾಗಾಗಿ, ಬೆಂಗಳೂರು, ಬಳ್ಳಾರಿ, ಕಡಪ ಹಾಗೂ ತೆಲಂಗಾಣದ ನಾನಾ ಜಿಲ್ಲೆಗಳಿಂದ ಹಲವಾರು ಪೋಷಕರು ಈತನಲ್ಲಿಗೆ ತಮ್ಮ ಮಕ್ಕಳನ್ನು ಚಿಕಿತ್ಸೆಗಾಗಿ ಕರೆ ತರುತ್ತಿದ್ದರು. ಇತ್ತೀಚೆಗೆ, 11 ಮಂದಿ ವಿದ್ಯಾರ್ಥಿಗಳು ಈತನ ಚಿಕಿತ್ಸೆಗೆ ಒಳಗಾಗಿದ್ದರು.

ಮೃತ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ನಾಟಿ ವೈದ್ಯ ಎನ್ನಲಾಗಿರುವ ಭುವನೇಶ್ವರ ರಾವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈತ ಅಸಲಿಗೆ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲದಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿಸಲಾಗಿದೆ.

"ಏಷ್ಯಾ ನೆಟ್‌ ತೆಲುಗು' ಜಾಲತಾಣದ ವರದಿಯ ಪ್ರಕಾರ, ಭುವನೇಶ್ವರ ರಾವ್‌ "ಯೂ ಟ್ಯೂಬ್‌' ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಿತನಾಗಿದ್ದ. ತನ್ನ ನಾಟಿ ವೈದ್ಯಶಾಸ್ತ್ರದಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದರ ಜತೆಗೆ, ಬುದ್ಧಿಮಾಂದ್ಯರನ್ನೂ ಸರಿಪಡಿಸುವುದಾಗಿ ಈತ ವಿಡಿಯೋಗಳಲ್ಲಿ ಹೇಳಿಕೊಂಡಿದ್ದ....

ಫೋಟೋ - http://v.duta.us/y_o6iQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/N_fUowAA

📲 Get Bangalore City News on Whatsapp 💬