ಮಣಿಪಾಲ ಆಸ್ಪತ್ರೆ: ತುರ್ತು ಚಿಕಿತ್ಸಾ ವಿಭಾಗಕ್ಕೆ ಮಾರ್ಗಸೂಚಿ

  |   Udupinews

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಎದುರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ಮಣಿಪಾಲಕ್ಕೆ ಬರುವ ಎಲ್ಲೆ ಆ್ಯಂಬುಲೆನ್ಸ್‌ ಮತ್ತು ಜನರ ವಾಹನಗಳಿಗೆ ಈ ಕೆಳಕಂಡ ಬದಲಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ

  • ಉಡುಪಿಯಿಂದ ಮಣಿಪಾಲಕ್ಕೆ ಬರುವ ಎಲ್ಲಾ ವಾಹನಗಳು ಮಣಿಪಾಲದ ಸಿಂಡಿಕೇಟ್‌ ವೃತ್ತದ ಬಳಿ ತಿರುವು ತೆಗೆದುಕೊಂಡು ರಜತಾದ್ರಿಗೆ ಹೋಗುವ ದಾರಿಯಲ್ಲಿ ಉಪೇಂದ್ರ ಪೈ ಸ್ಮಾರಕ ವೃತ್ತದ (ಹೊಟೇಲ್‌ ಕಂಟ್ರಿ ಇನ್‌) ಬಳಿ ತಿರುಗಿ ಹೊಟೇಲ್‌ ವ್ಯಾಲಿವ್ಯೂ ಎದುರಿಗೆ ಇರುವ ಆಸ್ಪತ್ರೆಯ ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.

  • ಕಾರ್ಕಳ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಬಳಿ ತಿರುವು ತೆಗೆದುಕೊಂಡು ಆಸ್ಪತ್ರೆಯ ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.

  • ಕುಂದಾಪುರ ಕಡೆಯಿಂದ ಬರುವ ಎಲ್ಲಾ ವಾಹನಗಳು ಮುಂಚಿನ ರೀತಿಯಲ್ಲಿಯೇ ಪೆರಂಪಳ್ಳಿ ಮಾರ್ಗವಾಗಿ ಉಪೇಂದ್ರ ಪೈ ಸ್ಮಾರಕ ವೃತ್ತದ (ಹೊಟೇಲ್‌ ಕಂಟ್ರಿ ಇನ್‌) ಬಳಿ ತಿರುಗಿ ಹೊಟೇಲ್‌ ವ್ಯಾಲಿವ್ಯೂ ಎದುರು ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.

ಫೋಟೋ - http://v.duta.us/HHwLzwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/MLbFUwAA

📲 Get Udupi News on Whatsapp 💬