ಮತಪಟ್ಟಿ ಪರಿಷ್ಕರಣೆ ನ.8ರವರೆಗೂ ವಿಸ್ತರಣೆ: ಡೀಸಿ

  |   Chikkaballapuranews

ಚಿಕ್ಕಬಳ್ಳಾಪುರ: ಕೇಂದ್ರ ಚುನಾವಣಾ ಆಯೋಗ ಸಮಗ್ರ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2020ರ ಸಂಬಂಧ ಅ.15ಕ್ಕೆ ಇದ್ದ ಕೊನೇ ದಿನವನ್ನು ನ.18ವರೆಗೂ ವಿಸ್ತರಿಸಿದ್ದು ದೋಷ ರಹಿತ ಮತ ಪಟ್ಟಿ ಸಿದ್ಧಗೊಳಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 10,17,964 ಮತದಾರರ ಪಟ್ಟಿ ಹೊಂದಿದ್ದು, ಈಗಾಗಲೇ 4,83000 ಮತದಾರ ಪಟ್ಟಿಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದರು.

ಜ.20ಕ್ಕೆ ಅಂತಿಮ ಮತಪಟ್ಟಿ ಬಿಡುಗಡೆ: ಜಿಲ್ಲೆಯ ಬಾಕಿ ಉಳಿದ ಮತ ಪಟ್ಟಿಗಳ ಪರಿಶೀಲನೆಯನ್ನು ಕಾಲಮಿತಿಯೊಳಗೆ ಪರಿಷ್ಕರಿಸಬೇಕು. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಬೂತ್‌ ಮಟ್ಟದ ಏಜೆಂಟ್‌ಗಳನ್ನು ನೇಮಕ ಮಾಡಿ ಪಟ್ಟಿಗಳ ಪರಿಶೀಲನೆಗೆ ಸಹಕರಿಸಬೇಕು ಎಂದರು.

ನ.25ರೊಳಗೆ ಕರಡು ಮತದಾರರ ಪಟ್ಟಿ ಪರಿಶೀಲಿಸಲಾಗುತ್ತದೆ. ನ.25 ರಿಂದ ಡಿ.24 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. 2020 ಜ.10ಕ್ಕೆ ಆಕ್ಷೇಪಣೆ ವಿಲೇವಾರಿ ಮಾಡಿ ಜ.17ಕ್ಕೆ ಪಟ್ಟಿಗಳ ಪೂರಕ ತಯಾರಿಕೆ ಮಾಡಲಾಗುತ್ತದೆ. ಜ.20ಕ್ಕೆ ಪಟ್ಟಿಗಳ ಸಮಗ್ರ ಪರಿಷ್ಕರಣೆ ಮಾಹಿತಿಯನ್ನು ಅಂತಿಮವಾಗಿ ಬಿಡುಗಡೆಗೊಳಿಸಲಾಗುತ್ತದೆ ಎಂದರು....

ಫೋಟೋ - http://v.duta.us/o7KgkAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/DL608QAA

📲 Get Chikkaballapura News on Whatsapp 💬