ರಾಜಕೀಯದಿಂದ ಜಾತಿ ದೂರವಿಡಬೇಕು

  |   Chamarajanagarnews

ಸಂತೆಮರಹಳ್ಳಿ: ಆದರ್ಶ ಪುರುಷರ ಜಯಂತಿಗಳ ಆಚರಣೆಯಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಶಪಥವನ್ನು ಮಾಡಬೇಕು ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು. ಯಳಂದೂರು ಪಟ್ಟಣದ ಜಹಗೀರ್ದರ್‌ ಬಂಗಲೆ ಮುಂಭಾಗ ತಾಲೂಕು ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮಾಯಣ ಪವಿತ್ರ ಗ್ರಂಥ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಪವಿತ್ರ ಗ್ರಂಥವಾಗಿದೆ. ಇಲ್ಲಿನ ತತ್ವಸಿದ್ಧಾಂತಗಳಲ್ಲಿ ಮೌಲ್ಯಗಳು ನಮ್ಮದಾಗಲಿ. ಭಾರತದಲ್ಲಿ ಧಾರ್ಮಿಕ ನಂಬಿಕೆಗಳು ಹೆಚ್ಚಾಗಿವೆ. ಎಲ್ಲವನ್ನೂ ಜಾತಿ ಹೆಸರಿನಲ್ಲಿ ನೋಡುವ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿದೆ. ಇದು ದೇಶದ ಪ್ರಗತಿಗೂ ಮಾರಕವಾಗುತ್ತಿದೆ ಎಂದರು.

ರಾಜಕೀಯದಿಂದ ಜಾತಿ ದೂರವಿಡಬೇಕು: ರಾಜಕೀಯದಿಂದ ಜಾತಿಯನ್ನು ದೂರವಿಟ್ಟರೆ ದೇಶಕ್ಕೆ ಭವಿಷ್ಯವಿದೆ. ಅಂಬೇಡ್ಕರ್‌ ಅವರಲ್ಲಿದ್ದ ಬುದ್ಧ, ಪುಲೆ, ಕಬೀರರ ಚಿಂತನೆಗಳು ನಮ್ಮ ಸಂವಿಧಾನದಲ್ಲಿದೆ. ಈ ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದೆ ಇದರ ಅನುಸರಣೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಭಾರತದ ಆರ್ಥಿಕತೆ ನೇಪಾಳ ಹಾಗೂ ಬಾಂಗ್ಲಾದೇಶಕ್ಕಿಂತ ಕಡಿಮೆಯಾಗಿದ್ದು ಇದಕ್ಕೂ ಕೂಡ ಭಾರತದ ಖನಿಜ ಹಾಗೂ ಮಾನವ ಸಂಪನ್ಮೂಲಗಳ ಬಳಕೆ ಸರಿಯಾಗಿ ಮಾಡದಿರುವುದೇ ಕಾರಣ ಎಂದು ತಿಳಿಸಿದರು....

ಫೋಟೋ - http://v.duta.us/M1i-ZQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2NAe7QAA

📲 Get Chamarajanagar News on Whatsapp 💬