ರಾಜ್ಯಕ್ಕೆ 4 ಟಿಎಂ‌ಸಿ‌ ನೀರು ಬಿಡುಗಡೆಗೆ ಮಹಾರಾಷ್ಡ್ರ ಸರ್ಕಾರದೊಂದಿಗೆ ಒಪ್ಪಂದ

  |   Karnatakanews

ಕಲಬುರಗಿ: ಬೇಸಿಗೆ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಡ್ರದಿಂದ ರಾಜ್ಯಕ್ಕೆ 4 ಟಿ.ಎಂ.ಸಿ‌ ನೀರು ಬಿಡುಗಡೆ ಮಾಡುವಂತೆ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಇದಕ್ಕೆ ಬದಲಾಗಿ ರಾಜ್ಯದ ತುಬಚಿ ಏತ ನೀರಾವರಿ ಯೋಜನೆಯಿಂದ ನೀರಿನ ಲಭ್ಯತೆ ಅನುಗುಣವಾಗಿ ಮಹಾರಾಷ್ಡ್ರದ ಬೋರಸಿ ನದಿಗೆ ನೀರು ಬಿಡುವ ಕುರಿತಂತೆ ಚರ್ಚಿಸಲಾಗುವುದು ಎಂದು ಹೇಳಿದ್ದೇನೆ ವಿನಹ ಬಿಡುಗಡೆ ಮಾಡಲಾಗುವುದು ಎಂದಿಲ್ಲ. ಇದೇ ಮಾತನ್ನು ಮಹಾರಾಷ್ಡ್ರದ ಚುನಾವಣಾ ಪ್ರಚಾರದಲ್ಲಿಯೂ ತಿಳಿಸಿದ್ದೇನೆ. ಯಾವುದೇ ಅಪಾರ್ಥ ಮಾಡಿಕೊಳ್ಳಬಾರದು.

ಶೀಘ್ರದಲ್ಲಿಯೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು.

371ಜೆ ಅನ್ಚಯ ರಚನೆಗೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಡಿ.ಸಿ.ಎಂ. ಗೋವಿಂದ ಕಾರಜೋಳ ಅವರನ್ನು ಶೀಘ್ರವೆ ನೇಮಕ ಮಾಡಿ ಆದೇಶ ಹೊರಡಿಸಲಾಗುವುದು.

ದತ್ತನ ಕ್ಷೇತ್ರವಾದ ದೇವಳ ಗಾಣಗಾಪೂರ ಅಭಿವೃದ್ಧಿಗೆ 10 ಕೋಟಿ ರೂ. ಆನುದಾನ ಬಿಡುಗಡೆ.

ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಕಲಬುರಗಿ ಜಿಲ್ಲೆಗೆ ಇಂದು ಬೆಳಿಗ್ಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವಲ ಘಾಣಗಾಪೂರದಲ್ಲಿ ದತ್ತನ ದರ್ಶನ ಪಡೆದ‌ನಂತರ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದರು....

ಫೋಟೋ - http://v.duta.us/zVE9BwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4O94TwAA

📲 Get Karnatakanews on Whatsapp 💬