ರಾಜ್ಯ ಸರ್ಕಾರಕ್ಕಿಲ್ಲ ಸಾಮಾನ್ಯ ಜ್ಞಾನ

  |   Uttara-Kannadanews

ಶಿರಸಿ: ಹೈದರಾಬಾದ್‌ ನಿಜಾಮನಿಗೆ ಇರುವ ಸಾಮಾನ್ಯ ಜ್ಞಾನ ರಾಜ್ಯ ಸರಕಾರಕ್ಕಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹರಿಹಾಯ್ದಿದ್ದಾರೆ.

ಅವರು ನಗರದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಜಾಮರು ಬೆಳೆ ಹಾನಿ ಆದ ಕಾಲದಲ್ಲಿ ರೈತರ ಬೆಂಬಲಕ್ಕೆ ನಿಂತಿದ್ದರು. ಸಾಲಮನ್ನಾ ಕೂಡ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮೂರು ದಿನ ಸಿಎಂ ಆದಾಗಲೇ ಘೋಷಿಸಿದ್ದ ರೈತರ ಪಾಲಿನ 1 ಲಕ್ಷ ರೂ. ವರೆಗಿನ ಸಾಲಮನ್ನಾ ಇನ್ನೂ ಮಾಡಿಲ್ಲ. ಪಕ್ಕದ ರಾಜ್ಯದ ಚುನಾವಾಣಾ ಪ್ರಚಾರಕ್ಕೆ ತೆರಳುವವರು ರೈತರ ಸಂಕಷ್ಟ ನೋಡಿಲ್ಲ ಎಂದೂ ವಾಗ್ಧಾಳಿ ಮಾಡಿದರು.

ರಾಜ್ಯದಲ್ಲಿ ಈಗಾಗಾಲೆ ಎರಡು ತಿಂಗಳ ಪ್ರವಾಹದ ಪರಿಣಾಮ ತೋಟಗಾರಿಕಾ ಮತ್ತು ಕೃಷಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಲೆನಾಡಿನಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ರೈತರ ಕಷ್ಟಕ್ಕೆ ಶೀಘ್ರ ಸ್ಪಂದಿಸದೇ ಇದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಪರಿಹಾರ ಕಾರ್ಯವನ್ನು ವೇಗವಾಗಿ ಮಾಡಬೇಕಿದೆ. ಭಾಗಶಃ ಬಿದ್ದ ಮನೆಗಳ ಕಥೆ ಕೂಡ ಕಷ್ಟವೇ ಇದ್ದು ಅವರಿಗೂ ಪೂರ್ಣ ಪ್ರಮಾಣದ ಹಾನಿ ಪರಿಹಾರ ಒದಗಿಸಬೇಕಾಗಿದೆ ಎಂದರು....

ಫೋಟೋ - http://v.duta.us/CGSpFQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1LFHhAAA

📲 Get Uttara Kannada News on Whatsapp 💬